ಬೆಂಗಳೂರು: ಫಲಿತಾಂಶ ಪ್ರಕಟವಾದ ಬಳಿಕ ಯಾವ ಯಾವ ರಾಜ್ಯಗಳಲ್ಲಿ ಸಿಎಂ ಗಳು ಅಧಿಕಾರ ಕಳೆದುಕೊಂಡು ತಿರುಗಾಡುತ್ತಿರುತ್ತಾರೆ ಅಂತ ಸದಾನಂದಗೌಡ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದ ಗೌಡ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು- ಮಾಜಿ ಪ್ರಧಾನಿ ದೇವೇಗೌಡ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸದಾನಂದಗೌಡ ಕಿಡಿ ಕಾರಿದ್ರು. ಚಂದ್ರಬಾಬು ನಾಯ್ಡುರವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು ಮತ್ತು ಸಿಎಂ ಕುಮಾರಸ್ವಾಮಿ ಇಬ್ಬರದ್ದೂ ಒಂದೇ ಮನಸ್ಥಿತಿ. ಅಧಿಕಾರ ಕಳೆದುಕೊಳ್ಳುವವರೆಲ್ಲಾ ಒಂದೆಡೆ ಸೇರುತ್ತಿದ್ದಾರೆ.
ಅಲ್ಲದೆ ಕರ್ನಾಟಕದಲ್ಲಿ ನಾಳೆ ಸಂಜೆವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ನಾಡಿದು ರಾಜೀನಾಮೆ ನೀಡ್ತಾರೆ. ಬಳಿಕ ಹೊಸ ಸರ್ಕಾರಕ್ಕೆ ವೇದಿಕೆ ಸಜ್ಜಾಗುತ್ತದೆ ಅಂತ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.
ಬಿಜೆಪಿಗೆ ಹೋಗ್ತಾರಾ ಕಾಂಗ್ರೆಸ್ ಶಾಸಕರು… ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ ತಪ್ಪದೇ ನೋಡಿ.