Saturday, May 25, 2024

Latest Posts

ಸಿಎಂ ಬದಲಾವಣೆ : ಮೋದಿಗೆ ಡಿವಿಎಸ್, ಜೋಶಿ ಹೇಳಿದ್ದೇನು..?

- Advertisement -

www.karnatakatv.net : ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ಕಡಿಮೆಯಾಗ್ತಿದ್ದ ಹಾಗೆಯೇ ರಾಜ್ಯದಲ್ಲಿ ಸಿಎಂ ಬದಲಾವಣೆ ಲೆಕ್ಕಾಚಾರ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್ ಯಡಿಯೂರಪ್ಪ ಅವರನ್ನ ಬದಲಾವಣೆ ಮಾಡಿ ಸಿಎಂ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಹೊಸ ಮುಖವನ್ನ ಪ್ರತಿಷ್ಠಾಪನೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ..

ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದು ಶಾಸಕರು ಹಾಗೂ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಅತ್ತ ದೆಹಲಿಯಲ್ಲಿ ಪ್ರಧಾನಿ ಮೋದಿ ಕೂಡ ಕೇಂದ್ರ ಸಚಿವ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಷಿ ಬಳಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಸದಾನಂದಗೌಡ ನೇರವಾಗಿ ಬಿಎಸ್ವೈ ಬದಾವಣೆಯಲ್ಲಿ ಯಾವುದೆ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ.. ಯಾಕಂದ್ರೆ ಡಿವಿಎಸ್ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಬಿಎಸ್ವೈ ಜೊತೆ ಆಗ ಮುನಿಸಿಕೊಂಡಿದ್ದ ಸಂದರ್ಭದಲ್ಲಿ ಡಿವಿಎಸ್ರನ್ನ ಸಿಎಂ ಮಾಡಿದ ಕೀತರ್ಿ ಬಿಎಸ್ವೈಗೆ ಸಲ್ಲುತ್ತೆ. ಹೀಗಾಗಿ ಡಿವಿಎಸ್ ಯಡಿಯೂರಪ್ಪ ಪರವಾಗಿ ಮಾತನಾಡುವ ಸಾಧ್ಯತೆ ಇದೆ. ಆದ್ರೆ, ಪ್ರಹ್ಲಾದ್ ಜೋಶಿ ಬ್ಯಾಕ್ಡೋರ್ ಮೂಲಕ ಸಿಎಂ ಬದಲಾವಣೆಗೆ ಮುಂದಾಗಿದ್ದಾರೆ.. ನಾನೇ ಸಿಎಂ ಆಗಬೇಕು ಇಲ್ಲವೇ ಸಿಎಂ ಬದಲಾಗಬೇಕು ಅಂತ ನಿಲುವು ಹೊಂದಿದ್ದಾರೆ.. ಸಚಿವ ಯೋಗೀಶ್ವರ್ ತಂಡ ಈಗಾಗಲೇ ಹೈಕಮಾಂಡ್ಗೆ ಪದೇಪದೇ ಸಿಎಂ ಬದಲಾವಣೆಗೆ ಒತ್ತಡ ಹಾಕಿದೆ. ಈ ನಡುವೆ ಸಿಎಂ ವಯಸ್ಸಿನ ಕಾರಣ ಹಾಗೂ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಉದ್ಧೇಶದಿಂದ ಸಿಎಂ ಬದಲಾವಣೆ ಬಿಜೆಪಿ ಅನಿವಾರ್ಯವಾಗಿದೆ. ಆದ್ರೆ, ಯಡಿಯೂರಪ್ಪ ಈಗಾಗಲೇ ಹೈಕಮಾಂಡ್ ರಾಜೀನಾಮೆ ಕೇಳಿದ್ರೆ ಕೊಡ್ತೇನೆ ಅನ್ನುವ ಮೂಲಕ ಗೊಂದಲಕ್ಕೆ ದೂಡಿದ್ದಾರೆ. ಯಾಕಂದ್ರೆ ಇಷ್ಟು ಸುಲಭವಾಗಿ ಹೈಕಮಾಂಡ್ಗೆ ಬಿ.ಬಿಎಸ್ ಯಡಿಯೂರಪ್ಪ ಬದಲಾಗ್ತಾರಾ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

- Advertisement -

Latest Posts

Don't Miss