ಡೈನಮಿಕ್ ಕುಟುಂಬದ ಡೈನಮಿಕ್ ಸೊಸೆ “ರಾಗಿಣಿ ಪ್ರಜ್ವಲ್”..!

ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾಕುಟುಂಬಗಳಿವೆ. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಡಾ.ರವಿಚಂದ್ರನ್, ರೆಬೆಲ್ ಸ್ಟಾರ್ ಅಂಬರೀಶ್, ಜೈ ಜಗದೀಶ್ ಹೇಗೆ ಹಲವು ಕಲಾವಿದರು ತಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರೂ ನಟನೆಯನ್ನೇ ದೇವರು ಅಂತ ನಂಬಿ ಜೀವನ ಸಾಗಿಸ್ತಿದ್ದಾರೆ . ಅದರಂತೆಯೇ ಹಿರಿಯ ನಟ ದೇವರಾಜ್ ಕುಟುಂಬದಲ್ಲೂ ಸಹ ಪ್ರತಿಯೊಬ್ಬರೂ ಸಹ ಸ್ಟಾರ್ ಕಲಾವಿದರೇ ಆಗಿದ್ದಾರೆ. ಇದೀಗ ಈ ಡೈನಮಿಕ್ ಕುಟುಂಬಕ್ಕೆ ಡೈನಮಿಕ್ ಸೊಸೆ ಕೂಡ ಸೇರ್ಪಡೆಯಾಗಿದ್ದು, ಇವ್ರ ಬಗ್ಗೆಯಂತೂ ಹೇಳೋದೇ ಬೇಡ. ಯಾಕಂತೀರ..ಹಿರಿಯ ನಟ ದೇವರಾಜ್ ಅದ್ಭುತ ನಟ ಅದರಲ್ಲಿ ಎರಡು ಮಾತೇ ಇಲ್ಲ, ಇನ್ನು ಪುತ್ರ ಪ್ರಜ್ವಲ್ ದೇವರಾಜ್ ಸಹ ಸಿಕ್ಸರ್ ಆಗಿ ಎಂಟ್ರಿ ಕೊಟ್ಟು ಜಬರ್ದಸ್ತ್ ನಟನೆ ಮೂಲಕ ಜೆಂಟಲ್‌ಮನ್ ಆಗಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟನಾಗಿದ್ದಾರೆ. ಕಿರಿಯ ಪುತ್ರ ಪ್ರಣಮ್ ದೇವರಾಜ್‌ಗೂ ನಟನೆ ಬಗ್ಗೆ ಹೆಚ್ಚು ಆಸಕ್ತಿಯಿದೆ. ಈಗಾಗಲೇ “ಕುಮಾರಿ 21 F” ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು ಈ ಡೈನಮಿಕ್ ಕುಟುಂಬದ ಇಷ್ಟೂ ಕಲಾವಿದರನ್ನ ಮೀರಿಸಿ ಆಲ್‌ರೌಂಡರ್ ಆಗಿರೋದು ಮತ್ತಿನ್ಯಾರೂ ಅಲ್ಲ ಪ್ರಜ್ವಲ್ ದೇವರಾಜ್ ಮುದ್ದು ಮಡದಿ ರಾಗಿಣಿ ಪ್ರಜ್ವಲ್. ಹೌದು, ಇವ್ರಿಗೆ ನಟನೆಯಂದ್ರೆ ಎಷ್ಟು ಇಷ್ಟವೋ ಡ್ಯಾನ್ಸ್ ಅಂದ್ರೆ ಅದಕ್ಕಿಂತ ದುಪ್ಪಟ್ಟು ಇಷ್ಟ. ತಮ್ಮ 4ನೇ ವಯಸ್ಸಿಗೆ ನೃತ್ಯ ತರಭೇತಿ ಪಡೆಯಲು ಶುರುಮಾಡಿದ ರಾಗಿಣಿ, ಕಥಕ್, ಭರತನಾಟ್ಯಂ ಸೇರಿದಂತೆ ಎಲ್ಲಾ ತರಹದ ಡ್ಯಾನ್ಸ್ ಮಾಡ್ತಾರೆ.

ಹೀಗಾಗಿಯೇ ತಮ್ಮ ಕನಸುಗಳಲ್ಲಿ ಒಂದಾಗಿರೋ ಡ್ಯಾನ್ಸ್ & ಫಿಟ್‌ನೆಸ್ ತರಭೇತಿಯನ್ನ ಚಿಕ್ಕಮಕ್ಕಳಿಂದ ಹಿಡಿದೂ ಹಿರಿಯರವರೆಗೂ ತಮ್ಮ”URhythmix” ಸ್ಟುಡಿಯೋದಲ್ಲಿ ಕಲಿಸ್ತಾರೆ. ಅಷ್ಟೇ ಅಲ್ಲ ಹೃತಿಕ್ ರೋಷನ್ ಅವ್ರ ಡ್ಯಾನ್ಸ್ ಸ್ಟೆöÊಲ್ ಅಂದ್ರೆ ಬಹಳ ಇಷ್ಟವಂತೆ. ಕನ್ನಡದಲ್ಲಿ ನಮ್ಮ ಅಪ್ಪು ಸರ್ ಡ್ಯಾನ್ಸ್ ಅಂದ್ರೆ ಇಷ್ಟ ಅಂತ ಕರ್ನಾಟಕ ಟಿವಿ ಜೊತೆ ಮಾತನಾಡಿದ ನಟಿ ರಾಗಿಣಿ ತಮ್ಮ ಮನದಾಳದ ಮಾತನ್ನ ಹಂಚಿಕೊAಡಿದ್ದಾರೆ.

ನಳಿನಾಕ್ಷಿ, ಕರ್ನಾಟಕ ನ್ಯೂಸ್

 

About The Author