Hubli News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ನಿಂದ ಇಂದು ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಉಪಯೋಗಿಸುವಂತಹ ಎಲ್ಲಾ ಬಳಕೆದಾರರನ್ನು ಇಂದು ಬೆಳಗ್ಗೆಯಿಂದ ದಿಢೀರ್ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಧಾರವಾಢ ಜಿಲ್ಲಾ ಆಸ್ಪತ್ರೆ, ಧಾರವಾಡದ ಮಾನಸಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೊಂದು ಠಾಣೆಯಿಂದ 20 ಕ್ಕೂ ಅಧಿಕ ಮಾದಕ ವಸ್ತು ಬಳಕೆದಾರರನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ವೈದ್ಯಕೀಯ ಪರೀಕ್ಷೆಯ ನಂತರ ಹುಬ್ಬಳ್ಳಿ ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬಳಕೆದಾರರಿಗೆ ಮಾನಸಿಕ ರೋಗ ತಜ್ಞರಿಂದ ಕೌನ್ಸೆಲಿಂಗ್ (ಆಪ್ತಸಮಾಲೋಚನೆ), ಬಳಕೆದಾರರ ಪೋಷಕರಿಗೆ ಮಕ್ಕಳ ಬಗೆಗಿನ ಕಾಳಜಿಯ ಬಗ್ಗೆ ಓರಿಯಂಟೇಷನ್ ಹಾಗೂ ಪಾಸಿಟೀವ್ ಬಂದ ಬಳಕೆದಾರನಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರೇಟ್ ಮಾಹಿತಿ ನೀಡಿದೆ.




