Tuesday, July 22, 2025

Latest Posts

ಚೀನಾದಲ್ಲಿ ಪ್ರಬಲ ಭೂಕಂಪ- ಮೂವರ ಸಾವು

- Advertisement -

www.karnatakatv.net :ಚೀನಾದ ಸಿಚುವಾಂಗ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.

ರಿಕ್ಟರ್ ಮಾಪಕದಲ್ಲಿ 6.0ರಷ್ಟು ತೀವ್ರತೆ ದಾಖಲಾಗಿದೆ. ಇಂದು ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಕಟ್ಟಡಗಳು ಹಾನಿಯಾಗಿವೆ. ಅಲ್ಲದೆ ಅವಶೇಷದಡಿ ಸಿಲುಕಿ ಮೂವರು ಮೃತಪಟ್ಟು ಸುಮಾರು 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇಲ್ಲಿನ ಲೌಝೂವು ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಕಾರ್ಯಾಚರಣೆ ಶುರುವಾಗಿದ್ದು, ಸಿಚುವಾಂಗ್ ಸುತ್ತಮುತ್ತಲ ಪ್ರದೇಶದ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

- Advertisement -

Latest Posts

Don't Miss