- Advertisement -
ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ಆಪ್ ನಾಯಕ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್‍ವಾಲ್ ಅವರಿಗೆ ಹಿನ್ನಡೆಯಾಗಿದೆ.
ರೋವ್ ಅವೆನ್ಯೂ ಕೋರ್ಟ್ ಜಾಮೀನಿಂದ ನಿರಾಳವಾಗಿದ್ದ ಕೇಜ್ರಿವಾಲ್‍ಗೆ ದೆಹಲಿ ಹೈಕೋರ್ಟ್ ಶಾಕ್ ಕೊಟ್ಟಿದೆ. ದೆಹಲಿ ಸಿಎಂ ಬಿಡುಗಡೆ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಸುಧೀರ್ ಕುಮಾರ್ ಜೈನ್ ಮತ್ತು ರವೀಂದ್ರ ದುಡೇಜಾ ಅವರ ರಜಾಕಾಲೀನ ವಿಭಾಗೀಯ ಪೀಠದ ಮುಂದೆ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಉಲ್ಲೇಖಿಸಿದರು.
ವಿಚಾರಣಾಧೀನ ನ್ಯಾಯಾಲಯದ ಜಾಮೀನು ಆದೇಶಕ್ಕೆ ತುರ್ತು ತಡೆ ನೀಡಬೇಕು ಎಂದು ಕೋರುತ್ತಿದ್ದೇನೆ. ರಾತ್ರಿ 8ಗೆ ಆದೇಶ ಮಾಡಲಾಗಿದೆ. ಇನ್ನೂ ಆದೇಶವನ್ನು ಅಪ್‌ಲೋಡ್ ಮಾಡಲಾಗಿಲ್ಲ. ಜಾಮೀನಿಗೆ ವಿರೋಧಿಸಲು ನಮಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ಎಎಸ್‌ಜಿ ಹೇಳಿದರು.
- Advertisement -