Film News : ಸ್ವಚ್ಛಂದವಾಗಿ ಪ್ರಣಯ ಪಕ್ಷಿಗಳಂತೆ ಹಾರಾಡಿಕೊಂಡಿದ್ದ ಆ ಜೋಡಿಯ ಪ್ರೇಮ್ ಕಹಾನಿ ಅರ್ಧಕ್ಕೆ ಬ್ರೇಕ್ ಆಗೋಯ್ತು.ನೀನೇ ನನ್ನ ಜೀವ ನಿನ್ನ ಬಿಟ್ರೆ ನನಗ್ಯಾರು ಇಲ್ಲ ಅಂತಿದ್ದ ಪ್ರಿಯಕರ ಇಂದು ಇವಳಲ್ಲ ಅವಳು ಅಂತಿದ್ದಾನಂತೆ , ಅಷ್ಟಕ್ಕೂ ಇದು ನಾರ್ಮಲ್ ಜೋಡಿಯ ಪ್ರೇಮ್ ಕೀ ಬಾತ್ ಅಲ್ವೇ ಅಲ್ಲ ಅವರು ಸೆಲೆಬ್ರಿಟಿ ಬ್ಯೂಟಿಫುಲ್ ಪೇರ್ಸ್.
ಅವರು ಖ್ಯಾತ ಕನ್ನಡದ ಯೂಟ್ಯೂಬರ್ ಗಳು ಈ ಬಾರಿಯ ಬಿಗ್ ಬಾಸ್ ಗೂ ಆಹ್ವಾನಿತರು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಕಂಪ್ಲೀಟ್ ಲೆಕ್ಕಾಚಾರವೇ ಉಲ್ಟಾ ಆಗಿದೆ. ಹೌದು ಖ್ಯಾತ ಕನ್ನಡದ ಯುಟ್ಯೂಬರ್‌ಗಳಾದ ವರ್ಷಾ ಕಾವೇರಿ, ವರುಣ್ ಜೋಡಿ ಈ ಬಾರಿಯ ಬಿಗ್ ಬಾಸ್ ಸೀಸನ್‌ಗೆ ಬರುತ್ತಾರೆ ಎಂದು ಕೆಲವರು ಲೆಕ್ಕ ಹಾಕಿದ್ದರು. ಆದರೆ ಈಗ ಲೆಕ್ಕಾಚಾರ ಉಲ್ಟಾ ಆಗಿದೆ. ಇವರಿಬ್ಬರು ಪ್ರೀತಿ ಮಾಡುತ್ತಿದ್ದ ವಿಚಾರ ಅನೇಕರಿಗೆ ಗೊತ್ತಿತ್ತು. ಈಗ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರಂತೆ. ವರ್ಷಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದಾರೆ.
ಆಟೋ ಓಡಿಸಿಕೊಂಡಿದ್ದ ಆ ಹುಡುಗನನ್ನು ಪ್ರೀತಿಗಾಗಿ ವರ್ಷಾ ತನ್ನ ಮನೆಯವರನ್ನು ಎದುರು ಹಾಕಿಕೊಂಡು ಛಲದಿಂದಲೇ ಉನ್ನತ ಸ್ಥಾನಕ್ಕೆ ತಂದಿದ್ದಳು. ಅವಳ ಆಸೆಯಂತೆ ವರುಣ್ ಕೂಡಾ ಬೆಳೆದು ನಿಂತಿದ್ದ ಆದರೆ ಅದು ಯಾರ ಕೆಟ್ಟ ಕಣ್ಣು ಬಿತ್ತೋ ಆ ಜೋಡಿ ಮೇಲೆ ಗೊತ್ತಿಲ್ಲ ಇಬ್ಬರ ಮಧ್ಯೆ ವಿಷಕನ್ಯೆಯೊ ಬ್ಬಳು ಬಂದೇ ಬಿಟ್ಟಳು . ವರುಣ್ ಇನ್ನೋರ್ವ ಹುಡುಗಿಯನ್ನು ಪ್ರೀತಿ ಮಾಡಲು ಶುರು ಮಾಡಿದ್ದನಂತೆ ಇದು ನಾವು ಹೇಳುತ್ತಿಲ್ಲ ವರ್ಷಳೇ ತನ್ನ ಪ್ರೀತಿ ದೂರಗಲು ಕಾರಣವನ್ನೂ ಬಿಚ್ಚಿಟ್ಟಿದ್ದಾಳೆ.
ಎಲ್ಲರಿಗೂ ನಮಸ್ಕಾರ, ತುಂಬ ದಿನದಿಂದ ನೀವೆಲ್ಲ ನನಗೆ ಕೇಳಿದ್ದಂತಹ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ, ವರುಣ್‌ಗೂ ಏನಾಯಿತೆಂದು.. ಆ ವಿಷಯದ ಬಗ್ಗೆ ನಾನು ಇವತ್ತು ಮಾತನಾಡಲು ಮುಂದೆ ಬಂದಿದ್ದೇನೆ. ನಿಮಗೆಲ್ಲ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ, ವರುಣ್ ಮಧ್ಯೆ ಮನಸ್ತಾಪಗಳು ಬಂದಿದ್ದು ನಾನು ಎಷ್ಟೇ ಹೇಳಿದರೂ ಸಹ ಅವನು ಆ ಹುಡುಗಿಯನ್ನು ಬಿಡೋದಿಕ್ಕೆ ತಯಾರಿಲ್ಲ. ಆದ್ದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ.
ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನ್ನ ಮನಸ್ಸಿಗೆ ತುಂಬ ನೋವಾಯ್ತು. ಆದ್ದರಿಂದ ನಾನು ಕಳೆದ ಎರಡು ತಿಂಗಳಿಂದ ನನ್ನ, ವರುಣ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ರೆ ನನಗೆ ನಾನೇ ಮೋಸ ಮಡಿಕೊಳ್ತೀನಿ ಅಂತ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡ್ತಿದ್ದೀನಿ. ಇನ್ನು ಮುಂದೆ ನನ್ನ ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರೋದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲಿ.ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ, ನಾನು ಅವರಿಗಾಗಿ ಜೀವನವನ್ನು ನಡೆಸಬೇಕು, ಆದ್ದರಿಂದ ನಿಮಗೆ ಹೇಳಬಢೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ, ಇನ್ನುಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಿರಿ ಎಂದು ನಾನು ಭಾವಿಸಿರುವೆ.ಇದು ಯಾವುದೇ ಪ್ರಾಂಕ್ ಅಲ್ಲ, ಕಳೆದ ಎರಡು ತಿಂಗಳಿನಿಂದ ನಾನು ಇದನ್ನು ಅನುಭವಿಸುತ್ತಿದ್ದೇನೆ. ನಿಮಗೆ ಇದು ಅರ್ಥವಾಗುತ್ತದೆ ಎಂದುಕೊಂಡಿರುವೆ. ಎಂಬುವುದಾಗಿ ತಮ್ಮ ಇನ್ಸ್ರಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಮತ್ತೊಂದೆಡೆ ಈ ಬಾರಿ ಕೂಡ ರಿಯಲ್ ಲವ್ವರ್ಸ್ ಬಿಗ್ ಬಾಸ್ ಮನೆಗೆ ಬರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಈಗ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಇವರಿಬ್ಬರಲ್ಲಿ ಯಾರಾದರೂ ಒಬ್ಬರಾದರೂ ಬರುತ್ತಾರಾ ಅಂತ ಕಾದು ನೋಡಬೇಕಿದೆ.
ಒಟ್ಟಾರೆ ಲೈಲಾ ಮಜುನೂ ರೋಮಿಯೋ ಜೂಲಿಯೆಟ್ ಗಳ ಪ್ರೇಮ್ ಕಹಾನಿ ಕೇಳಿದವರಿಗೆಲ್ಲ ಇದೀ ಗ ಆ ಕಾಲದ ಪ್ರೀತಿ ಆ ಕಾಲಕ್ಕೆ ಇಂದಿನ ಪ್ರೀತಿ ಅನ್ನೋದು ಇಷ್ಟೇ ಅಂತ ಹೇಳೋಕ್ಕೆ ಶುರು ಮಾಡಿದ್ದಾರೆ. ಆದ್ರೂ ಪ್ರಣಯ ಪಕ್ಷಿಗಳಿಗೊಂದು ಮಾತು ಸ್ವಾರ್ಥದ ಆಕರ್ಷಣೆಗೆ ಪ್ರೀತಿಯ ಹಣೆ ಪಟ್ಟಿ ಕಟ್ಟಿ ಪವಿತ್ರ ಪ್ರೀತಿಯ ಅರ್ಥವನ್ನು ಬದಲಾಯಿಸದಿರಿ. ಯಾಕಂದ್ರೆ ಪ್ರೀತಿಯನ್ನೇ ದೇವರೆಂದು ಪೂಜಿಸುವವರು ಇನ್ನೂ ಇದ್ದಾರೆ.
Dharshan : ಐತಿಹಾಸಿಕ ಸಿನಿಮಾ ಮಾಡ್ತಾರಾ ದರ್ಶನ್..?! ಏನಿದು ಪೋಸ್ಟರ್..?!