ಸೂಪರ್ ಸ್ಟಾರ್‌ಗಳ ಸಿನಿಮಾ ನೋಡ್ಬೇಕಂದ್ರ ಕಾಮನ್ನಾಗಿ ನಾವೆಲ್ರೂ ಆಟೋ, ಬೈಕ್, ಓಲಾ, ಅಥವಾ ಕಾರ್‌ನಲ್ಲಿ ಹೋಗ್ತೀವಿ. ಆದ್ರೆ ಇಲ್ಲಿ ಮಂತ್ರಿಯೊಬ್ಬರು ಸಿನಿಮಾ ನೋಡಲು ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಆಶ್ಚರ್ಯದ ವಿಷಯ..
ಹೌದು, ಮಕ್ಕಳು ಮತ್ತು ಪೇರೆಂಟ್ಸ್ ಮೊಬೈಲ್ ಚಟದ ಬಗ್ಗೆ ಬಂದಿರುವ ಚಿತ್ರ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ದಿನೇ ದಿನೇ ಜನಪ್ರಿಯ ಆಗುತ್ತಿದೆ ಎಂಬುದು ಗಮಿಸಬೇಕಾದ ವಿಷಯ. ಮಧುಚಂದ್ರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರದಲ್ಲಿ ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅವರು ನಟಿಸಿದ್ದಾರೆ. ಚಿತ್ರ ಸಂಪೂರ್ಣ ಕಾಮಿಡಿ ಇದ್ದರೂ ಜನರನ್ನ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯಶಸ್ವಿ ಆಗಿದೆ.
ಅದಕ್ಕೆ ಸಾಮಾಜಿಕ ಕಳಕಳಿ ಇದೆ ಎಂಬ ಕಾರಣಕ್ಕೆ ಸರ್ಕಾರ ಅದನ್ನು ಬೆಂಬಲಿಸುವ ಉದ್ದೇಶದಿಂದ ಮಾನ್ಯ ಶಿಕ್ಷಣ ಮಂತ್ರಿ ನಾಗೇಶ್ ಸಿನಿಮಾ ನೋಡಲು ಮಲ್ಲೇಶ್ವರಂ ಮಂತ್ರಿ ಮಾಲ್ ಗೆ ಬಂದರು.
ಸಿನಿಮಾ ನೋಡಿದ ಕೂಡಲೇ ಅವರು ಅದ್ಭುತವಾದ ಪ್ರತಿಕ್ರಿಯೆ ನೀಡಿದರು. ಈ ಸಿನಿಮಾವನ್ನು ಮಕ್ಕಳು ತಮ್ಮ ತಂದೆ ತಾಯಿಗಳ ಜೊತೆಯಲ್ಲಿ ತಪ್ಪದೇ ನೋಡಿ ಎಂದು ತಿಳಿಸಿ, ಜೊತೆಗೆ ಎಲ್ಲಾ ಶಾಲಾ ಮಕ್ಕಳಿಗೆ ಈ ಸಿನಿಮಾ ನೋಡಲು ಶಿಕ್ಷಕರು ಪ್ರೇರೇಪಿಸುವ ಮೂಲಕ ಅವರ ಮೊಬೈಲ್ ಚಟದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ವ್ಯಕ್ತಪಡಿಸಿದರು.
ನಳಿನಾಕ್ಷಿಕಾರಹಳ್ಳಿ, ಕರ್ನಾಟಕ ಟಿವಿ