ದೆಹಲಿ: ಶಿಕ್ಷಣ ಭೋದನಾ ಶುಲ್ಕ ಯಾವಗಲೂ ಕೈಗೆಟುಕುವಂತಿರಬೇಕು ಅದು ವ್ಯಾಪಾರವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೆಡಿಕಲ್ ಕಾಲೇಜುಗಳ ಭೋಧನಾ ಶುಲ್ಕವನ್ನು ವಾರ್ಷಿಕ 24 ಲಕ್ಷಕ್ಕೆ ಹೆಚ್ಚಿಸಿದ್ದ ಸರ್ಕಾರದ ನಿರ್ಧಾರವನ್ನು ರದ್ದುಮಾಡಿ ಆಂಧ್ರಪ್ರದೇಶದ ಹೈಕೋರ್ಟ್ ಕ್ರಮ ಎತ್ತಿ ಹಿಡಿಯಿತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಾರಾಯಣ ಮೆಡಿಕಲ್ ಕಾಲೇಜು ಮತ್ತು ಆಂಧ್ರಪ್ರದೇಶದ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದವು. ನಾರಾಯಣ ಮೆಡಿಕಲ್ ಕಾಲೇಜು ಮತ್ತು ರಾಜ್ಯ ಸರ್ಕಾರ ಪ್ರಕರಣದ ವೆಚ್ಚ ಒಟ್ಟು 5 ಲಕ್ಷ ನೀಡಬೆಕು ಎಂದು ನ್ಯಾಯಪೀಠ ಆದೇಶಿಸಿತ್ತು. ಈ ಮೊತ್ತವನ್ನು 6 ವಾರಗಳ ಒಳಗೆ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇಡಲು ಸೂಚಿಸಿತ್ತು. ಭೋಧನಾ ಶುಲ್ಕ 24 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ಮೊದಲಿನ ಶುಲ್ಕಕ್ಕಿಂತ ೇಳು ಪಟ್ಟು ಜಾಸ್ತಿ ಇದೆ. ಯಾವ ರೀತಿಯಲ್ಲೂ ಈ ಕ್ರಮ ಸರಿಯಲ್ಲವೆಂದು ನ್ಯಾಯಪೀಠ ತಿಳಿಸಿದೆ.
ಕೆಂಪೇಗೌಡರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಬಿಬಿಎಂಪಿ ನಿರ್ಧಾರ : 31 ಸಾಧಕರಿಗೆ ಪ್ರಶಸ್ತಿ ವಿತರಣೆ
ಬೇಡಿಕೆ ಕುಸಿದಿದ್ದರಿಂದ, ಎಲೆಕ್ಟ್ರಿಕ್ ಉತ್ಪನ್ನಗಳ ಉತ್ಪಾದನಾ ಕಂಪನಿ ಮಿಟ್ಸುಬಿಷಿಗೆ ಬೀಗ ..!