Sunday, June 1, 2025

Latest Posts

ಫ್ರಾನ್ಸ್ ಅಧ್ಯಕ್ಷನ ಮೇಲೆ ಮೊಟ್ಟೆ ಎಸೆತ…!

- Advertisement -

www.karnatakatv.net : ಲಿಯಾನ್ ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಆಹಾರ ಮೇಳಕ್ಕೆ ತೆರಳಿದ್ದ ವೇಳೆ ಮ್ಯಾಕ್ರನ್ ಗುರಿಯಾಗಿರಿಸಿಕೊಂಡು  ಹಿಂದಿನಿಂದ ಒಂದು ಮೊಟ್ಟೆಯನ್ನು ಎಸೆಯಲಾಗಿದೆ. ಇನ್ನು ಅದೃಷ್ಟವಶಾತ್ ಮೊಟ್ಟೆ ಮ್ಯಾಕ್ರನ್ ಬೆನ್ನಿಗೆ ತಗುಲಿದೆ. ಅಷ್ಟೇ ಅಲ್ಲ ಆ ಮೊಟ್ಟೆ ಒಡೆಯದೆ ವಾಪಸ್ ಹಿಂದಕ್ಕೆ ಪುಟಿದಿದೆ. ಇನ್ನು ಮೊಟ್ಟೆ ಎಸೆದ ಕೂಡಲೇ ಸೆಕ್ಯೂರಿಟಿ ಗಾರ್ಡ್ ಗಳು ಇಮ್ಯಾನುವೆಲ್ ಮೆಕ್ರಾನ್ ರನ್ನು ಪಕ್ಕಕ್ಕೆ ಎಳೆದುಕೊಂಡ್ರು.

ಇನ್ನು ಈ ಮೊಟ್ಟೆ ಎಸೆದ ವ್ಯಕ್ತಿಯಿಂದ ಆಹಾರ ಮೇಳದಿಂದ ಹೊರಕ್ಕೆ ಕಳುಹಿಸಲಾಯ್ತು. ಆದ್ರೆ ಆತ ಯಾರು ಯಾಕೆ ಹೀಗೆ ಮಾಡಿದ  ಅನ್ನೋದು ಈ ವರೆಗೂ ತಿಳಿದುಬಂದಿಲ್ಲ. ಆದ್ರೆ ಮೆಕ್ರಾನ್ ಮಾತ್ರ ಆ ವ್ಯಕ್ತಿ ನನ್ನ ಬಳಿ  ಏನಾದ್ರೂ ಮಾತನಾಡಬೇಕು ಅಂದ್ರೆ ನನ್ನ ಬಳಿ ಬಂದು ಚರ್ಚಿಸಲಿ ಅಂತ ಹೇಳಿದ್ದಾರೆ.

- Advertisement -

Latest Posts

Don't Miss