Thursday, November 27, 2025

Latest Posts

20 ಜಿಲ್ಲೆಗಳಲ್ಲಿ ಚುನಾವಣೆ ಜ್ವಾಲೆ, ಭಾರತ – ನೇಪಾಳ ಗಡಿ ಬಂದ್!​

- Advertisement -

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಾಳೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ. ನೇಪಾಳದ ಗಡಿಯ ಕೆಲ ಭಾಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮಹೋಟ್ಟರಿ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಸಂಜಯ್ ಕುಮಾರ್ ಪೋಖ್ರೆಲ್ ಅವರು ಮಾಹಿತಿ ನೀಡಿದ್ದಾರೆ.

ಬಿರ್ಗುಂಜ್–ರಕ್ಸೌಲ್ ಗಡಿ ಸೇರಿದಂತೆ ಮಹೋಟ್ಟರಿ ಜಿಲ್ಲೆಯ ಎಲ್ಲ ಗಡಿಗಳನ್ನು 72 ಗಂಟೆಗಳ ಕಾಲ ಬಂದ್ ಮಾಡಲಾಗಿದೆ. ನವೆಂಬರ್ 11ರಂದು ಬಿಹಾರದಲ್ಲಿ ಮತದಾನ ನಡೆಯಲಿರುವುದರಿಂದ ಶನಿವಾರದಿಂದಲೇ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ನವೆಂಬರ್ 12ರಂದು ಬೆಳಿಗ್ಗೆಯಿಂದ ಗಡಿಯನ್ನು ಮತ್ತೆ ತೆರೆಯಲಾಗುವುದು ಎಂದು ತಿಳಿಸಿದರು.

ನೇಪಾಳ, ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ಗಡಿಯಲ್ಲಿರುವ 20 ಜಿಲ್ಲೆಗಳ ಒಟ್ಟು 122 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತಪ್ರಚಾರ ಭಾನುವಾರ ಮುಗಿದಿದ್ದು, ಎನ್‌ಡಿಎ ಹಾಗೂ ಮಹಾಘಟಬಂಧನ್ ಪಕ್ಷಗಳ ನಾಯಕರು ಅಂತಿಮ ಕ್ಷಣದವರೆಗೂ ತೀವ್ರ ಪ್ರಚಾರ ನಡೆಸಿದರು. ಈ ಹಂತದಲ್ಲಿ 1,302 ಅಭ್ಯರ್ಥಿಗಳು ಕಣದಲ್ಲಿದ್ದು, 3.7 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ 6,255 ಹಿರಿಯ ಮತದಾರರು ಕೂಡ ಒಳಗೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಸಾರಾಮ್‌ನಲ್ಲಿ ಮತಯಾಚನೆ ನಡೆಸಿ, ರಕ್ಷಣಾ ಕಾರಿಡಾರ್‌ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಘೋಷಿಸಿದರು. ಅವರು ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ದಾಳಿಗೆ ನಿರ್ಣಾಯಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಹೊಸ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು.

ಮತದಾನ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿದ್ದು, ಕಾನೂನು–ಸುವ್ಯವಸ್ಥೆಯ ಕಾರಣದಿಂದ ಚೈನ್‌ಪುರ, ರಾಜೌಲಿ, ಗೋವಿಂದಪುರ, ಸಿಕಂದ್ರ, ಜಮುಯಿ, ಝಾಝಾ, ಚಕೈ, ಔರಂಗಾಬಾದ್, ಗಯಾ ಮತ್ತು ಕೈಮೂರ್ ಜಿಲ್ಲೆಗಳಲ್ಲಿ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಕೇಂದ್ರ ಚುನಾವಣಾ ಆಯೋಗವು ಪಾಟ್ನಾದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿದೆ ಎರಡನೇ ಹಂತದ ಮತದಾನ ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದೆ.

ವರದಿ : ಲಾವಣ್ಯ ಅನಿಗೋಳ 

- Advertisement -

Latest Posts

Don't Miss