ಧಾರವಾಡ : ಜಿಲ್ಲೆಯಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳಿಯ ಚುನಾವಣೆ ಫಲಿತಾಂಶ ವಿಷಯವಾಗಿ ಪರ-ವಿರೋಧಿ ಬಣಗಳ ನಡುವೆ ರಾಜಕೀಯ ಹೋರಾಟ ಜೋರಾಗಿ ನಡೆದಿದೆ. 13-08-2023 ಕ್ಕೆ ನಡೆದ ಚುನಾವಣೆಯಲ್ಲಿ, 3 ನೇ ಅವಧಿಗೆ ಮರಾಠಾ ವಿದ್ಯಾಪ್ರಸಾರಕ ಮಂಡಳಿ ಅಧ್ಯಕ್ಷರಾಗಿ ಉದ್ಯಮಿ ಎಂ.ಎನ್.ಮೋರೆ ಆಯ್ಕೆಯಾಗಿದ್ದಾರೆ.
ಇದನ್ನು ವಿರೋಧ ಮಾಡಿರುವ ಪ್ರತಾಪ ಚವ್ಹಾಣ ಬಣದ ಮುಖಂಡರು ಚುನಾವಣೆ ಪಾರದರ್ಶಕವಾಗಿಲ್ಲಾ ಚುನಾವಣೆಯಲ್ಲಿ ಅಕ್ರಮವಾಗಿದೆ, ಈ ಬಗ್ಗೆ ತನಿಖೆ ಆಗಲಿ ಎಂದು, 4-5 ದಿನಗಳ ಹಿಂದೆಯಷ್ಟೇ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಇದನ್ನು ವಿರೋಧಿಸಿ ಇಂದು, ಮೋರೆ ಅವರ ಪರವಾಗಿ ಮೋರೆ ಬಣದ ಮುಖಂಡರು, ರಾಜಕೀಯ ಷಡ್ಯಂತ್ರ ಮಾಡುತ್ತಿರುವ ವಿರೋಧಿ ಬಣದ ನಡೆಯನ್ನು ಖಂಡಿಸಿದ್ರು. ಚುನಾವಣೆಯಲ್ಲಿ ಯಾವುದೇ ಅಕ್ರಮ ಆಗಿಲ್ಲಾ. ಪಾರದರ್ಶಕವಾಗಿ ನಡೆದಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಎಂದು ಮೋರೆ ಬಣದವರು ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದ್ರು.
ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಈ ಚುನಾವಣೆಯ ಗೊಂದಲವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಗೆ ಬಗೆಹರಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.
Book publish : ಭ್ರಷ್ಟಾಚಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ : ಬಸವರಾಜ ಬೊಮ್ಮಾಯಿ
Formers loans: ಸಾಲ ವಸೂಲಿ ನಿಲ್ಲಿಸಬೇಕು ;ಹೆಚ್ಚಿದ ರೈತರ ಆತ್ಮಹತ್ಯೆ: ಬೊಮ್ಮಾಯಿ..!