ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗೆ ಮುಹೂರ್ತ ಫಿಕ್ಸ್: ಜೂ.10ರಂದು ಮತದಾನ, ಅವತ್ತೇ ರಿಸಲ್ಟ್

ನವದೆಹಲಿ: ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದಂತ ನಾಲ್ಕು ಸ್ಥಾನಗಳ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಇಂತಹ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ ಮಾಡಿದೆ.

ದಿನಾಂಕ 30-06-2022ರಂದು ನಿವೃತ್ತಿ ಹೊಂದಲಿರುವಂತ ಕೆ.ಸಿ ರಾಮಮೂರ್ತಿ, ಅಸ್ಕರ್ ಫರ್ನಾಂಡಿಸ್ ( ನಿಧನದಿಂದ ತೆರವಾದ ಸ್ಥಾನ ), ಜೈರಾಂ ರಮೇಶ್ ಹಾಗೂ ನಿರ್ಮಲಾ ಸೀತಾರಾಮನ್ ಸ್ಥಾನಗಳಿಗೆ, ದಿನಾಂಕ 10-06-2022ರಂದು ಚುನಾವಣೆ ನಿಗದಿ ಮಾಡಲಾಗಿದೆ.

ದಿನಾಂಕ 31-05-2022ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದರೇ, ದಿನಾಂಕ 06-06-2022ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ದಿನಾಂಕ 03-06-2022ರಂದು ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. 10-06-2022ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತಏಣಿಕೆ ಆರಂಭಗೊಂಡು, ಫಲಿತಾಂಶ ಪ್ರಕಟವಾಗಲಿದೆ.

About The Author