Sunday, September 8, 2024

Latest Posts

Electricity Problem :ವಿದ್ಯುತ್ ಕಡಿತದಿಂದಾಗಿ ಕಂಗಾಲಾದ ಅನ್ನದಾತರು.

- Advertisement -

ಹುಬ್ಬಳ್ಳಿ:  ಸರಿಯಾಗಿ ಮಿದ್ಯುತ್ ಪೂರೈಕೆಯಾಗುತ್ತಿಲ್ಲ ಹಾಗಾಗಿ ನಮ್ಮ ಜಮೀನುಗಳಿಗೆ ಸರಿಯಾಗಿ ನೀರುಣಿಸಲು ಆಗದೇ ಬೆಳೆಗಳು ಒಣಗುತ್ತಿವೆ ಎಂದು ರೈತರು ನಗರದ ಹೆಸ್ಕಾಂ ಕೇಂದ್ರ ಕಛೇರಿ ಮುಂದೆ  ಪ್ರತಿಭಟನೆ ನಡೆಸಿದರು.

ಅನಿಯಮಿತ ವಿದ್ಯುತ್ ಪೂರೈಕೆಯಿಂದ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ,ಬೆಳಗಾವಿ ಸೇರಿದಂತೆ ಏಳು ಜಿಲ್ಲೆಗಳಿಂದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಆದರೆ ದಿನದಲ್ಲಿ ಕೇವಲ 2 ರಿಂದ 3 ತಾಸು ವಿದ್ಯುತ್ ನೀಡಿದರೆ ನಾವು ಬೆಳೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳ ಈ ನಡೆಗೆ ಹೆಸ್ಕಾಂ ಕೇಂದ್ರ ಕಛೇರಿ ಎದುರಿಗೆ ರೈತರು ಅಡುಗೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.

ದಿನದಲ್ಲಿ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಿ ಎಂದು ಸರ್ಕಾರ ವಿದ್ಯುತ್ ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದರು.

Congress Gurentee : ತಾಯಿ ಮಕ್ಕಳ ಪೋಷಣೆ ಸರ್ಕಾರದ ಹೊಣೆ..!

Mysore Dasara: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರಾ ಉದ್ಘಾಟನೆ…!

Mysore Chamundi devi; ದೇವಿ ಹಾಗೂ ಜನರ ಆಶೀರ್ವಾದದಿಂದ ಗ್ಯಾರಂಟಿ ಯೋಜನೆಗಳು ಯಶಸ್ವಿ ಜಾರಿ:

- Advertisement -

Latest Posts

Don't Miss