Wednesday, September 24, 2025

Latest Posts

ಎಲೆಕ್ಟ್ರಿಕ್‌ ಸ್ಕೂಟರ್‌ ಇದೇ ನಂಬರ್‌ 1

- Advertisement -

Honda Activa E ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್

ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದು ಸ್ಟ್ಯಾಂಡರ್ಡ್ & ರೋಡ್‌ಸಿಂಕ್ ಎಂಬ ವೇರಿಯೆಂಟ್ ಗಳೊಂದಿಗೆ ಲಭ್ಯವಿದ್ದು, ಕ್ರಮವಾಗಿ 1.17 ಲಕ್ಷದಿಂದ 1.52 ಲಕ್ಷ ಬೆಲೆ ಇದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ-ಆಸ್-ಎ-ಸರ್ವಿಸ್ ಪ್ಲ್ಯಾನ್‌ನಡಿ ಬೆಂಗಳೂರು, ದೆಹಲಿ ಹಾಗೂ ಮುಂಬೈ ಮಹಾನಗರಗಳಲ್ಲಿ ಮಾತ್ರ ಮಾರಾಟಗೊಳಿಸಲಾಗುತ್ತಿದೆ.

ಬಾಸ್ ಪ್ಲ್ಯಾನ್‌ನಡಿ Honda Activa e ಮಾಲೀಕರು, ಖಾಲಿಯಾಗಿರುವ ಬ್ಯಾಟರಿಯನ್ನು ತಮ್ಮ ಸಮೀಪದ ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಇಡಬೇಕು. ಆ ಬಳಿಕ ಮೊದಲೇ ಸಂಪೂರ್ಣವಾಗಿ ಭರ್ತಿಯಾದ ಬ್ಯಾಟರಿಯನ್ನು ತೆಗೆದುಕೊಳ್ಳುವುದಾಗಿದೆ. ಇದಕ್ಕಾಗಿ ಮಾಸಿಕ ರೂ.678 ಶುಲ್ಕ ವಿಧಿಸಲಾಗುತ್ತದೆ. ಸದ್ಯ ಹೋಂಡಾ ಬೆಂಗಳೂರಿನಲ್ಲಿ 83 ಹಾಗೂ ನವದೆಹಲಿಯಲ್ಲಿ 10 ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ. ಆದರೆ ಮುಂಬೈನಲ್ಲಿ ಯಾವುದೇ ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ ಇಲ್ಲ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುವ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಚಾರ್ಜಿಂಗ್ ಡಾಕ್ ನ್ನು ಪರಿಚಯಿಸಲು ಹೋಂಡಾ ಹಣಿಯಾಗುತ್ತಿದೆ. ಚಾರ್ಜಿಂಗ್ ಡಾಕ್ ಬಳಕೆ ಮಾಡಿ, ಆಕ್ಟಿವಾ ಇ ಸ್ಕೂಟರ್‌ನ ಬ್ಯಾಟರಿ ಪ್ಯಾಕ್‌ನ್ನು ಸುಲಭವಾಗಿ ಮನೆಯಲ್ಲಿಯೇ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಅಂದರೆ, ಸ್ಕೂಟರ್‌ನಲ್ಲಿ ಬಳಕೆ ಮಾಡಿದ ಬ್ಯಾಟರಿಯನ್ನು ಈ ಸಾಧನದ ನೆರೆವಿನೊಂದಿಗೆ ಚಾರ್ಜಿಂಗ್ ಮಾಡುವುದಾಗಿದೆ.

ಒಟ್ಟಾರೆಯಾಗಿ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮನೆಯಲ್ಲಿ ಚಾರ್ಜ್ ಮಾಡಲು ಸಾಧ್ಯವಾಗುವಂತೆ, ಕಂಪನಿಯು ‘ಚಾರ್ಜಿಂಗ್ ಡಾಕ್’ನ್ನು ನೀಡಲಿದೆ ಎನ್ನಲಾಗುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಆಗೊಮ್ಮೆ ಈ ಸಾಧನವನ್ನು ಒದಗಿಸಿದರೆ, ಸಾವಿರಾರು ಜನರಿಗೆ ಪ್ರಯೋಜನವು ಆಗಲಿದೆ. ಆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಜನರು ‘ಆಕ್ಟಿವಾ ಇ’ ಖರೀದಿಯತ್ತ ಮುಖ ಮಾಡಬಹುದು. ಇದರಿಂದ ಮಾರಾಟ ಪ್ರಮಾಣವು ಸುಧಾರಿಸುವ ನಿರೀಕ್ಷೆಯಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss