Assam News:
ತೆಜ್‌ಪುರ್ ನಗರದಲ್ಲಿ ಆಹಾರ ಹುಡುಕಿ ನದಿಯನ್ನೇ ದಾಟಿ ಬಂದ ಕಾಡಾನೆಗೆ ಪಟ್ಟಣದಲ್ಲಿ ಆಹಾರವೂ ಸಿಗಲಿಲ್ಲ, ನೆಮ್ಮದಿಯೂ ಇರಲಿಲ್ಲ. ಕಾಡು ಪ್ರಾಣಿಗಳಿಗೆ ಆಹಾರ ಸಿಗದಿರುವುದು ಅತೀ ದೊಡ್ಡ ದುರಂತವಾಗಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಅರಣ್ಯದಲ್ಲಿ ಆಹಾರ ಸಿಗದೆ ಪರದಾಡಿದ ಕಾಡಾನೆ ಪ್ರತಿ ದಿನ ಕಾಡಿನಲ್ಲಿ ಅಲೆದಾಡಿದೆ. ಸರಿಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಕಾಜಿರಂಗ ಅರಣ್ಯದಲ್ಲಿ ಈ ಕಾಡನೆಗೆ ಆಹಾರ ಸರಿಯಾಗಿಲ್ಲ ಸಿಕ್ಕಿಲ್ಲ. ಕಾಜಿರಂಗ ರಾಷ್ಟ್ರೀಯ ಅರಣ್ಯದ ಪಕ್ಕದಲ್ಲಿರುವ ಗ್ರಾಮದಲ್ಲಿ ಕಾಡಾಣೆಗಳು ಪ್ರತ್ಯಕ್ಷವಾಗುತ್ತಿರುವು ಸರ್ವೇ ಸಾಮಾನ್ಯವಾಗಿದೆ. ಆದರೆ ಈ ಕಾಡನೆ ಹಸಿವಿನಿಂದ ಕಂಗೆಟ್ಟಿದೆ. ಹೀಗಾಗಿ ಬ್ರಹ್ಮಪುತ್ರ ನದಿಯನ್ನು ಈಜಿ ದಾಡಿದೆ. ಮಳೆಗಾಲ ಹಾಗೂ ಅಸ್ಸಾಂನಲ್ಲಿ ಭಾರಿ ಮಳೆಯಾಗಿರುವ ಕಾರಣ ಬ್ರಹ್ಮಪುತ್ರ ನದಿ ತುಂಬಿ ಹರಿಯುತ್ತಿದೆ. ಈ ನದಿಯನ್ನು ದಾಟಿದ ಕಾಡನೆ ತೇಜ್‌ಪುರ್ ನಗರಕ್ಕೆ ಆಗಮಿಸಿದೆ.
ರಾತ್ರಿ 3 ಗಂಟೆಗೆ ತೇಜ್‌ಪುರ್ ನಗರಕ್ಕೆ ಆಗಮಿಸಿದ ಕಾಡಾನೆಗೆ ಹಸಿವು ಮಾತ್ರವಲ್ಲ ಭಯವೂ ಕಾಡಿದೆ. ಜನರ ಚೀರಾಟ, ವಾಹನದ ಸದ್ದು, ಕಾಡನೆ ನೋಡಿದ ಜನರು ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನಗಳಿಂದ ಕಾಡಾನೆ ಮತ್ತಷ್ಟು ಕಂಗಾಲಾಗಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಕಾಡಾನೆಯನ್ನು ಕಾಡಿಗೆ ಅಟ್ಟಲಾಗಿದೆ.
ಕಾಡನೆ ನಾಡಿಗೆ ಬಂದ ವಿಡಿಯೋ ವೈರಲ್ ಆಗಿದೆ. ತೆಜ್‌ಪುರ್ ನಗರದಲ್ಲಿ ಕಾಡಾನೆ ಅಹಾರಕ್ಕೆ ಅಲೆದಾಡುತ್ತಿರುವ ವಿಡಿಯೋ ನಿಜಕ್ಕೂ ನೋವು ತರಿಸುತ್ತದೆ. ಕಾಡು ಪ್ರಾಣಿಗಳಿಗೆ ಆಹಾರ ಸಿಗದಿರುವುದು ಅತೀ ದೊಡ್ಡ ದುರಂತವಾಗಿದೆ. ಈ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರ ಹಾಗೂ ತಜ್ಞರು ಚಿಂತಿಸಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಕಂಡು ಬಂದಿದೆ.
17 ಯುವತಿಯರು ಅರ್ಧ ಗಂಟೆ ಲಿಫ್ಟ್ ನಲ್ಲಿ ಲಾಕ್…! ಮುಂದೇನಾಯ್ತು ಗೊತ್ತಾ..?!