www.karnatakatv.net :ಕೇರಳಾದ ಪಾಲಕ್ಕಾಡ್ ಐಐಟಿಯಲ್ಲಿ ಆನೆಗಳ ಹಿಂಡು ನುಗ್ಗಿ ಆತಂಕ ಸೃಷ್ಟಿ ಮಾಡಿತ್ತು. ಇನ್ನು ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟಲು ಇನ್ನಿಲ್ಲದ ಪ್ರಯತ್ನ ನಡೆದಿದೆ.
ಇಲ್ಲಿನ ಕಾಂಜಿಕೋಡ್ ಐಐಟಿ ಕ್ಯಾಂಪಸ್ ನಲ್ಲಿ ಇಂದು ಬೆಳಗ್ಗೆ 16 ಆನೆಗಳ ಹಿಂಡು ಒಮ್ಮೆಲೇ ಲಗ್ಗೆಯಿಟ್ಟಿತ್ತು. ಆನೆಗಳನ್ನು ಕಂಡ ಸ್ಥಳೀಯರು ಅವುಗಳನ್ನು ಕಾಡಿಗಟ್ಟಲು ಪಟಾಕಿ ಸಿಡಿಸಿದ್ರು. ಇದರಿಂದ ಗಾಬರಿಗೊಂಡ ಗಜಪಡೆ ದಿಕ್ಕಾಪಾಲಾಗಿ ಕ್ಯಾಂಪಸ್ ನಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡಗಳ ಬಳಿ ಓಡಿಹೋದವು. ಇದರಿಂದ ಕಟ್ಟಡ ಕಾರ್ಮಿಕರು ಹೆದರಿ ಮರವೇರಿ ಕುಳಿತ್ರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಹಿಂಡನ್ನು ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಈ ಕಾಂಜಿಕೋಡ್ ಪ್ರದೇಶವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿದ್ದು ಇದು ಕಾಡು ಪ್ರಾಣಿಗಳ ಆವಾಸ ಸ್ಥಾನವಾಗಿತ್ತು. ಆದ್ರೆ ಸದ್ಯ ನಗರೀಕರಣದಿಂದಾಗಿ ಅರಣ್ಯಪ್ರದೇಶಗಳು ನಾಶವಾಗ್ತಿದ್ದು, ಸಹಜವಾಗಿಯೇ ಈ ರೀತಿ ಕಾಡು ಪ್ರಾಣಿಗಳು ನಗರದತ್ತ ಮುಖ ಮಾಡ್ತಿವೆ.




