Special Story: ಕರ್ನಾಟಕ ಟಿವಿಯ ವಿಶೇಷ ಕಾರ್ಯಕ್ರಮವಾದ ದಾರಿದೀಪದಲ್ಲಿ ಪ್ರಕೃತಿ ಚಿಕಿತ್ಸಾಲಯದ ಆಯುರ್ವೇದ ವೈದ್ಯ ಡಾ.ರಾಜೇಶ್ ಅವರ ಸಂದರ್ಶನ ಮಾಡಲಾಗಿದೆ.
ನಾವು ಜೀವಿಸುತ್ತಿರುವ ಜೀವನ ಶೈಲಿ ತಪ್ಪಾಗಿದ್ದು, ಇದರಿಂದ ಹೊರಬಂದು, ಆರೋಗ್ಯಕರವಾಗಿ ಜೀವಿಸಬೇಕು ಅಂದ್ರೆ, ನೀವು ಆಯುರ್ವೇದ ಜೀವನಶೈಲಿಯನ್ನೇ ಅನುಸರಿಸಬೇಕು ಅಂತಾರೆ ವೈದ್ಯರು.
ಆಯುರ್ವೇದ ಅಂದ್ರೆ ಬರೀ ಒಂದು ಔಷಧೀಯ ಪದ್ಧತಿ ಅಲ್ಲ. ಇದು ಜೀವಿಸುವ ಜೀವನಶೈಲಿ. ಬೇಗ ಮಲಗಿ, ಬೇಗ ಏಳುವುದು. ಸಸ್ಯಾಹಾರವನ್ನಷ್ಟೇ ಸೇವಿಸುವುದು. ಇಂಗ್ಲೀಷ್ ಮೆಡಿಸಿನ್ ಮೊರೆ ಹೋಗದೇ, ಜೀವಿಸುವುದೇ ಆಯುರ್ವೇದ ಜೀವನ ಶೈಲಿ.
ಇನ್ನು ಭಾರತೀಯರಿಗಿಂತ ಹೆಚ್ಚಾಗಿ ವಿದೇಶಿಗರು ಆಯುರ್ವೇದದ ಜೀವನಶೈಲಿ ಅನುಸರಿಸುತ್ತಿದ್ದಾರೆ. ಕೆಲ ವಿದೇಶಿಗರು ಭಾರತಕ್ಕೆ ಬಂದಾಗ, ಈ ಪ್ರಕೃತಿ ಚಿಕಿತ್ಸಾಲಯಕ್ಕೆ ಬಂದು, ಚಿಕಿತ್ಸೆ ಪಡೆದು, ಹೋಗುತ್ತಿದ್ದಾರೆ. ಹಾಗೆ ಹೋದವರು, ಮತ್ತೆ ಅನಾರೋಗ್ಯವಾದರೆ, ಅಥವಾ ಯಾರಾದರೂ ಅನಾರೋಗ್ಯಕ್ಕೀಡಾದರೆ, ಮೊದಲು ರೆಫರ್ ಮಾಡುವುದೇ ಈ ಚಿತ್ರಕೂಟ, ಆಯುರ್ವೇದ ಚಿಕಿತ್ಸಾಲಯವನ್ನು.
ಹಾಗಂತ, ಎಷ್ಟು ಜನ ಬಂದರೂ, ಯಾವಾಗ ಬಂದರೂ, ಹೇಗೆ ಬಂದರೂ ಇಲ್ಲಿ ನಿಮಗೆ ಚಿಕಿತ್ಸೆ ಸಿಗುತ್ತದೆ ಎಂದು ತಿಳಿಬೇಡಿ. ಇಲ್ಲಿ ಉತ್ತಮ ಕ್ವಾಲಿಟಿಯ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ಒಂದು ಬಾರಿ ಬರೀ 40 ಜನರಿಗಷ್ಟೇ ಈ ಚಿಕಿತ್ಸಾಲಯದಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತದೆ. ಅಂಥವರು ಇಲ್ಲಿನ ನಿಯಮವನ್ನು ಫಾಲೋ ಮಾಡಲೇಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಸಂದರ್ಶನ ನೋಡಿ.