Thursday, October 16, 2025

Latest Posts

ನೌಕರರೇ ಇಲ್ಲಿದೆ ನಿಮಗೆ ದೀಪಾವಳಿಯ ಬಂಪರ್ ಗಿಫ್ಟ್!

- Advertisement -

ಕರ್ನಾಟಕ ಸರ್ಕಾರವು ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ದೀಪಾವಳಿಯ ಅಂಗವಾಗಿ ಬಂಪರ್ ಉಡುಗೊರೆ ನೀಡಿದ್ದು, ತುಟ್ಟಿಭತ್ಯೆ ಶೇಕಡಾ 2ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಈ ಹೊಸ ದರದಂತೆ, ಈಗಿನ ಶೇಕಡಾ 12.25ರಷ್ಟು ತುಟ್ಟಿಭತ್ಯೆ ಶೇಕಡಾ 14.25ಕ್ಕೆ ಹೆಚ್ಚಳವಾಗಿದ್ದು, ಈ ಹೆಚ್ಚಳವು 2025ರ ಜುಲೈ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆ. ಈ ಕುರಿತು ಆರ್ಥಿಕ ಇಲಾಖೆ 2025ರ ಅಕ್ಟೋಬರ್ 15ರಂದು ಆದೇಶ ಹೊರಡಿಸಿದೆ.

ಹಾಗಾದ್ರೆ ಯಾರಿಗೆಲ್ಲಾ ಅನ್ವಯವಾಗಲಿದೆ?
ರಾಜ್ಯ ಸರ್ಕಾರಿ ನೌಕರರು – 2024ರ ನವೀಕರಿತ ವೇತನ ಶ್ರೇಣಿಯಲ್ಲಿ ಬರುವ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಈ ಹೆಚ್ಚಿದ ತುಟ್ಟಿಭತ್ಯೆ ಅನ್ವಯವಾಗಲಿದೆ. ನಿವೃತ್ತಿ ವೇತನದಾರರಿಗೆ ಅನ್ವಯವಾಗತ್ತೆ. ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಕುಟುಂಬ ನಿವೃತ್ತಿ ವೇತನದಾರರು, ಹಾಗು ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರಿಗೆ ಈ ದರ ಅನ್ವಯವಾಗಲಿದೆ.

ಇನ್ನು ಸರ್ಕಾರ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ವರ್ಕ್‌ಚಾರ್ಜ್ ನೌಕರರು, ಮತ್ತು ಅನುದಾನಿತ ವಿಶ್ವವಿದ್ಯಾಲಯ/ಶಿಕ್ಷಣ ಸಂಸ್ಥೆಗಳ ನೌಕರರು, ಇತರೆ ನೌಕರರು ಈ ಆದೇಶದ ವ್ಯಾಪ್ತಿಗೆ ಒಳಪಡುತ್ತಾರೆ. UGC, AICTE, ICAR ನೌಕರರು ಅಂದ್ರೆ ನಿವೃತ್ತ ನೌಕರರಿಗೆ ಈ ದರ ಅನ್ವಯವಾಗಿದ್ದು, ಪ್ರಸ್ತುತ ಸೇವೆಯಲ್ಲಿರುವ ನೌಕರರಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡತಕ್ಕದ್ದು. ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು, 2025ರ ಅಕ್ಟೋಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನುಈ ಬದಲಾವಣೆಯಿಂದ ರಾಜ್ಯದ ಲಕ್ಷಾಂತರ ನೌಕರರು ಮತ್ತು ನಿವೃತ್ತರಿಗೆ ಹಣಕಾಸು ಪರಿಹಾರ ಲಭ್ಯವಾಗಲಿದ್ದು, ಮುಂದಿನ ತಿಂಗಳ ವೇತನದಲ್ಲಿ ಈ ಹೆಚ್ಚಳದ ಪರಿಣಾಮಗಳು ದರ್ಶನ ನೀಡಲಿವೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಆರ್ಥಿಕ ಇಲಾಖೆ ಸರ್ಕಾರದ ಜಂಟಿ ಕಾರ್ಯದರ್ಶಿ ಅವರ ಸಹಿಯೊಂದಿಗೆ ಈ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss