www.karnatakatv.net : ಬೆಂಗಳೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಕನ್ನಡ ಮಾತೃಭಾಷೆಯ ಮೂಲಕ ಇಂಜಿನಿಯರಿಂಗ್ ವಿಷಯವನ್ನು ಭೋಧಿಸಲು ಮುಂದಾಗಿದೆ.
ಹೌದು, ನೆರೆ ರಾಜ್ಯಗಳಲ್ಲಿ ಇಂಜಿನಿಯರಿಂಗ್ ಪದವಿಯನ್ನು ತಮ್ಮ ಮಾತೃಭಾಷೆಯಲ್ಲೇ ಭೋಧನೆಯನ್ನು ಮಾಡುತ್ತಿದ್ದರು ಆದರೆ ಕರ್ನಾಟಕ ದಲ್ಲಿ ಮಾತ್ರ ಆ ಸೂಚನೆ ಬಂದಿರಲಿಲ್ಲ, ಈಗ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ರಾಜ್ಯದ 4 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಸಾಲಿನಿಂದಲೇ ಕನ್ನಡದಲ್ಲಿ ಬೋಧನೆ ಕಲಿಕೆಯು ಆರಂಭವಾಗಲಿದೆ ಎಂದರು.
ವಿಜಯಪುರದ ಬಿಎಲ್.ಡಿ.ಇ.ಎ.ವಿ.ಪಿ.ಡಾ.ಪಿ.ಜಿ.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜು , ಭಾಲ್ಕಿಯ ಭೀಮಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ, ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ, ಮತ್ತು ಚಿಕ್ಕವಳ್ಳಾಪುರದ ಎಸ್.ಜೆ.ಸಿ ತಾಂತ್ರಿಕ ಮಹಾವಿದ್ಯಾಲಯ ಗಳಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 30 ವಿದ್ಯಾರ್ಥಿಗಳನ್ನು ಈ ಕೋರ್ಸ್ ಗಳಿಗೆ ತೆಗೆದುಕೊಳ್ಳಬಹುದಾಗಿದೆ. ರಾಷ್ಟ್ರೀಯ ಮಾನ್ಯತಾ ಮಂಡಳಿ ಮಾನ್ಯತೆ ಪಡೆದಿರುವ ಕಾಲೇಜುಗಳಿಗೆ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಬೋಧಿಸಲು ಅವಕಾಶ ನೀಡಲಾಗಿದೆ ಎಂದರು.
ಕರ್ನಾಟಕ ಟಿವಿ – ಬೆಂಗಳೂರು