International News:
ಭಾರತೀಯ ಖಾದ್ಯದ ರುಚಿಗೆ ಸೋತ ಇಂಗ್ಲೆಂಡ್ ದಂಪತಿ ತಮ್ಮ ಮಗುವಿಗೆ ಅದೇ ಖಾದ್ಯದ ಹೆಸರನ್ನಿಟ್ಟ ಪ್ರಸಂಗ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಹೆಸರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಐರ್ಲೆಂಡ್‌ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ರೆಸ್ಟೋರೆಂಟ್‌ಗೆ ಇಂಗ್ಲೆಂಡ್‌ನ ದಂಪತಿ ಆಹಾರ ಸವಿಯಲು ಬಂದಿದ್ದರು. ಅಲ್ಲಿ ಭಾರತೀಯ ಖಾದ್ಯ ಪಕೋರಾವನ್ನು ಸವಿದ ದಂಪತಿ ಈ ಖಾದ್ಯದ ರುಚಿಗೆ ಮಾರುಹೋಗಿ ತಮ್ಮ ನವಜಾತ ಶಿಶುವಿಗೆ ಅದೇ ಹೆಸರಿಟ್ಟಿದ್ದಾರೆ. ಈ ವಿಚಾರವನ್ನು ರೆಸ್ಟೋರೆಂಟ್ ತನ್ನ ಫೇಸ್ಬುಕ್ ಪೇಜ್‌ನಲ್ಲಿ ಘೋಷಿಸಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.
ನವಜಾತ ಶಿಶುವಿನ ಫೋಟೋವನ್ನೂ ಪೋಸ್ಟ್‌ನಲ್ಲಿ ಹಂಚಿಕೊಂಡ ರೆಸ್ಟೋರೆಂಟ್, ಖಾದ್ಯದ ಹೆಸರನ್ನಿರಿಸಿದ ಮೊದಲ ಮಗು ಇದಾಗಿದೆ ಪಕೋರಾಗೆ ಜಗತ್ತಿಗೆ ಸ್ವಾಗತ. ನಿಮ್ಮನ್ನು ಭೇಟಿ ಮಾಡಲು ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ ರೆಸ್ಟೋರೆಂಟ್ ಪೇಜ್. ಪಕೋರಾ ತಿಂಡಿಯ ಬಿಲ್ ರಶೀದಿಯ ಫೋಟೋವನ್ನೂ ಜೊತೆಗೆ ಪೋಸ್ಟ್ ಮಾಡಲಾಗಿದೆ.
BREAKING: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ಸಾವು
ಅಮಿತ್ ಶಾ ಅಧ್ಯಕ್ಷತೆಯಲ್ಲಿ ಕೇರಳದ ತಿರುವನಂತಪುರದಲ್ಲಿ ದಕ್ಷಿಣ ವಲಯ ಪರಿಷತ್ ಸಭೆ
‘ಟ್ವಿಟ್ಟರ್ ಬಳಕೆದಾರ’ರಿಗೆ ಭರ್ಜರಿ ಗುಡ್ ನ್ಯೂಸ್: ಈಗ ‘ಪೋಸ್ಟ್ ಎಡಿಟ್’ ಮಾಡಲು ಅವಕಾಶ