Thursday, June 19, 2025

Latest Posts

ಆಂಗ್ಲ ಭಾಷೆಯಲ್ಲಿ ಏಳು ಸಾವಿರ ವ್ಯಾಕರಣ ಬರೆದ ಗ್ರಾಮೀಣ ಪ್ರತಿಭೆ .!

- Advertisement -

ಕೋಲಾರ :ಹಳ್ಳಿಯಲ್ಲಿರುವ ಶಾಲಾ ವಿದ್ಯಾರ್ಥಿಗಳು ಆಂಗ್ಲ ಭಾಷೆ ಎಂದರೆ ಕಬ್ಬಿಣದ ಕಡೆಲೆಯಾಗಿರುತ್ತದೆ. ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುವಾಗ ಆಂಗ್ಲ ಭಾಷೆ ಗೊತ್ತಿಲ್ಲದೆ ಎಷ್ಟೊ ಜನ ನಿರುದ್ಯೋಗಿಗಳಾಗುತ್ತಿದ್ದಾರೆ. ಇಂತಹದರಲ್ಲಿ ಕೋಲಾರ ಜಿಲ್ಲೆಯಲ್ಲಿ ಗಡಿ ಭಾಗದ ಗ್ರಾಮೀಣ ಪ್ರದೇಶದ ಬಡ ಟೆಂಪೋ ಚಾಲಕನ ಮಗ ಕನ್ನಡ ಮಾದ್ಯಮದಲ್ಲೇ ಶಿಕ್ಷಣ ಪಡೆದು 22ನೇ ವಯಸ್ಸಿಗೆ ಇಂಗ್ಲಿಷ್ ಭಾಷೆಯಲ್ಲಿ ಬರೋಬ್ಬರಿ 6 ವಿಶ್ವದಾಖಲೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗಡಿಬಾಗದ ರಾಯಸಂದ್ರ ಗ್ರಾಮದ ಖಾಸಗಿ ಬಸ್ ಚಾಲಕ ಕೃಷ್ಣಶೆಟ್ಟಿ ಹಾಗೂ ನೇತ್ರಾವತಿ ದಂಪತಿಯ ಮಗ ಗೋವರ್ಧನ್  ಇಂಗ್ಲಿಷ್ ಭಾಷೆಯ ವ್ಯಾಕರಣದಲ್ಲಿ 6 ವಿಶ್ವದಾಖಲೆ ಮಾಡುವ ಮೂಲಕ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ, ಗೋವರ್ಧನ್  1 ರಿಂದ 12ನೇ ತರಗತಿವರೆಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ  ವಿದ್ಯಾಭ್ಯಾಸ ಮಾಡಿ ನಂತರ ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಬಿಕಾಂ ಪದವಿಗೆ ಸೇರಿದ ಗೋವರ್ಧನ್ ಗೆ ಮೊದಮೊದಲು  ಇಂಗ್ಲಿಷ್ ಭಾಷೆಯನ್ನು ಕಲಿಯಲು ಪರದಾಡಿದ್ದಾರೆ ನಂತರ ಇಂಗ್ಲಿಷ್ ಭಾಷೆಯನ್ನು ಕಲಿಯಲೇ ಬೇಕೆಂದು ಹಠಕ್ಕೆ ಬಿದ್ದು ಹಲವಾರು ಕೋಚಿಂಗ್ ಸೆಂಟರ್ ಗಳಲ್ಲಿ ತರಬೇತಿ ಪಡೆದಿದ್ದಾರೆ. ಹಗಲು ರಾತ್ರಿ ಕಷ್ಟಪಟ್ಟು ಈಗ ಅದೇ ಭಾಷೆಯಲ್ಲಿಯೇ ಸಾಧನೆ ಮಾಡಿ ವಿಶ್ವ ದಾಖಲೆ ಮಾಡಿದ್ದಾರೆ.

7 ಸಾವಿರ ಇಂಗ್ಲಿಷ್ ವ್ಯಾಕರಣದ ಸೂತ್ರ ಬರೆದು ವಿಶ್ವದಾಖಲೆ:

ಇಂಗ್ಲಿಷ್ ಬಾಷೆಯ  7 ಸಾವಿರ ವ್ಯಾಕರಣದ ಸೂತ್ರಗಳನ್ನು ಕೇವಲ 4 ಗಂಟೆ 58 ನಿಮಿಷ 2 ಸೆಕೆಂಡ್ ಗಳಲ್ಲಿ ಬರೆಯುವ ಮೂಲಕ ಹಳ್ಳಿ ಹುಡುಗ ಗೋವರ್ಧನ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಹಿಂದೆ ಮಾಲೂರಿನ ಮತ್ತೊಬ್ಬ ಯುವಕನೇ ನಿರ್ಮಿಸಿದ್ದ 5 ಗಂಟೆ 38 ನಿಮಿಷ 6 ಸೆಕೆಂಡ್ ಗಳಲ್ಲಿ 5 ಸಾವಿರ ಇಂಗ್ಲಿಷ್ ವ್ಯಾಕರಣ ಸೂತ್ರಗಳ ವರ್ಲ್ಡ್ ರೆಕಾರ್ಡ್  ದಾಖಲೆಗಳನ್ನು  ಬ್ರೇಕ್ ಮಾಡುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್, ಕಲಾಂಸ್ ಬುಕ್ ಆಫ್ ರೆಕಾರ್ಡ್‌, ಹೈರೇಂಜ್ ಬುಕ್ ಆಫ್ ರೆಕಾರ್ಡ್, ಎಕ್ಸ್ ಕ್ಲ್ಯೂಸಿವ್ ಬುಕ್ ಆಫ್ ರೆಕಾರ್ಡ್, ಕಿಂಗ್ಸ್ ಬುಕ್ ಆಫ್ ರೆಕಾರ್ಡ್ ಹಾಗೂ ಇತ್ತೀಚೆಗೆ ಅಮೆರಿಕನ್ ಬುಕ್ ಆಫ್ ರೆಕಾರ್ಡ್ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಓದಿರುವ ನನಗೆ ಇಂಗ್ಲಿಷ್ ಕಲಿಯುವುದು ಎಷ್ಟು ಕಷ್ಟವಾಗಿರುತ್ತದೆ ಎಂಬುದು ತಿಳಿದಿದೆ. ಛಲತೊಟ್ಟು ಇಂಗ್ಲಿಷ್ ಕಲಿತು ನಾನು ಬೇರೆ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿ ಎಂದು ಉಚಿತವಾಗಿ ಇಂಗ್ಲಿಷ್ ಬೋಧನೆ ಮಾಡುತ್ತಿದ್ದೇನೆ. ಇಂಗ್ಲಿಷ್ ನಲ್ಲಿ ವಿಶ್ವ ದಾಖಲೆ ಮಾಡಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಗೋವರ್ಧನ್ ಹರ್ಷ ವ್ಯಕ್ತಪಡಿಸಿದರು.

ಇಂಜಿನಿಯರ್ಸ್, ಡಾಕ್ಟರ್ಸ್, ಬ್ಯಾಂಕ್ ಸಿಬ್ಬಂದಿ, ಲಾಯರ್ಸ್, ಟೀಚರ್ಸ್ ಸೇರಿದಂತೆ ಹಲವಾರು ವರ್ಗದ  5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭೋದನೆ ಮಾಡಿದ್ದಾರೆ. ಅಲ್ಲದೆ ತಾನು ಓದಿದ ಮಾಲೂರಿನ ಸರ್ಕಾರಿ ಪದವಿ ಕಾಲೇಜಿನ 130 ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ಹೇಳಿಕೊಡುತ್ತಿದ್ದಾರೆ. ಅಂದಹಾಗೆ 22ನೇ ವಯಸ್ಸಿಗೆ 6 ವಿಶ್ವದಾಖಲೆ ಮಾಡಿರುವ ಗೋವರ್ಧನ್ ಅವರು ಸದ್ಯ ಮಾಲೂರಿನಲ್ಲಿ ಖಾಕಿ ಅಕಾಡೆಮಿ ಎಂಬ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ನಡೆಸುತ್ತಿದ್ದಾರೆ. ಮುಂದೆ IAS ಆಗವ ಗುರಿ ಹೊಂದಿದ್ದು ಅದಕ್ಕಾಗಿ ಯುಪಿಎಸ್ ಸಿ ಪರೀಕ್ಷೆಗೂ ತಯಾರಾಗುತ್ತಿದ್ದಾರೆ.

- Advertisement -

Latest Posts

Don't Miss