ನತಾಶಾ ಜೊತೆಗಿನ ಡಿವೋರ್ಸ್ ನಂತರ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ.
ಯಸ್.. ಹಾರ್ದಿಕ್ ಪಾಂಡ್ಯ, ಫಾರಿನ್ ಬ್ಯೂಟಿಯ ಜೊತೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅರೇ! ಇದೇನಪ್ಪಾ ನಮ್ಮ ಹಾರ್ದಿಕ್ ಪಾಂಡೆ ಮತ್ತೆ ಫಾರಿನ್ ಹುಡುಗಿಯ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ನತಾಶಾ ಅವರು ಕೂಡಾ ಭಾರತದವರಲ್ಲ. ಈಗ ಈ ನಟಿಯೂ ಭಾರತದವರಲ್ಲ. ಅಂತೂ ಪಾಂಡ್ಯಗೆ ಫಾರಿನ್ ಯುವತಿಯರ ಹುಚ್ಚು ಬಿಟ್ಟಿಲ್ವ ಅಂತ ನೆಟ್ಟಿಗರು ಕಾಲೆಳೆಯೋಕೆ ಶುರು ಮಾಡಿದ್ದಾರೆ.
ಪಾಂಡ್ಯ ಹಾಗೂ ನಟಿ ನತಾಶಾ ಅವರ ಡಿವೋರ್ಸ್ ಎಲ್ಲೆಡೆ ಭಾರೀ ಸದ್ದುಮಾಡಿತ್ತು. ಹಾರ್ದಿಕ್ ಪಾಂಡ್ಯ ವಿಚ್ಛೇದನೆ ಅನೌನ್ಸ್ ಮಾಡಿ ಇನ್ನು 1 ತಿಂಗಳಾಗಿದೆ ಅಷ್ಟೇ. ಅಷ್ಟರಲ್ಲೇ ಮತ್ತೊಬ್ಬ ಬ್ರಿಟಿಷ್ ಸಿಂಗರ್ ಮತ್ತು ನಟಿ ಜಾಸ್ಮಿನ್ ವಾಲಿಯಾ ಜೊತೆ ಪಾಂಡ್ಯ ಹೆಸರು ತಳುಕು ಹಾಕಿಕೊಂಡಿದೆ.
ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಬ್ರಿಟಿಷ್ ನಟಿ ಜಾಸ್ಮಿನ್ ಸ್ವಿಮ್ಮಿಂಗ್ ಪೂಲ್ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅದೇ ಜಾಗದಲ್ಲಿಯೇ ಹಾರ್ದಿಕ್ ರೀಲ್ಸ್ ಮಾಡಿದ್ದಾರೆ. ಜೊತೆಗೆ ಇಬ್ಬರೂ ಸ್ವಲ್ಪ ಸಮಯದ ಅಂತರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿದ್ದಾರೆ. ಹಾಗಾಗಿ ಇವರು ಗ್ರೀಸ್ನಲ್ಲಿ ಒಟ್ಟಿಗೆ ವೆಕೇಷನ್ ಎಂಜಾಯ್ ಮಾಡುತ್ತಿರುವಂತೆ ಕಂಡು ಬಂದಿದೆ. ಇದೀಗ ನೆಟ್ಟಿಗರು ಓಹ್! ಹೊಸ ಜೋಡಿ ಎನ್ನುತ್ತಿದ್ದಾರೆ.
*ಸ್ವಾತಿ.ಎಸ್.