Thursday, December 26, 2024

Latest Posts

ಹೊಸ ಸಿನಿಮಾಗೆ ಪ್ರಭಾಸ್ ಸಹಿ; ನಿರ್ದೇಶಕ ಯಾರು ಗೊತ್ತಾ?

- Advertisement -

ನಾಗ ಅಶ್ವಿನ್​ ನಿರ್ದೇಶನದ ಕಲ್ಕಿ 2898 AD ನಂತರ ರೆಬೆಲ್ ಸ್ಟಾರ್​ ಪ್ರಭಾಸ್​​ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನು ಪ್ರಭಾಸ್​ ‘ದಿ ರಾಜಾಸಾಬ್’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ. ಇದಾದ ಮೇಲೆ ಡಾರ್ಲಿಂಗ್​ ಪ್ರಭಾಸ್ ಯಾರ ನಿರ್ದೇಶನದಲ್ಲಿ ಕಾಣಿಸುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಸದ್ಯ ಈ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.

ಯಸ್​..’ಕಲ್ಕಿ 2898AD’ ಬ್ಲಾಕ್‌ಬಸ್ಟರ್ ಬೆನ್ನಲ್ಲೇ ಪ್ರಭಾಸ್​ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಡಾರ್ಲಿಂಗ್​ ಹೊಸ ಚಿತ್ರಕ್ಕೆ ಸೀತಾ ರಾಮಂ ಚಿತ್ರದ ನಿರ್ದೇಶಕ ಹನು ರಾಘವಪುಡಿ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಇನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸೆಟ್ಟೇರುತ್ತಿರುವ ಸಿನಿಮಾ ಇದಾಗಿದ್ದು, 1940 ರ ದಶಕದ ಕಥೆ ಇದಾಗಿದೆ ಎನ್ನಲಾಗಿದ್ದು, ಈ ಚಿತ್ರದಲ್ಲಿ ಪ್ರಭಾಸ್ ಯೋಧನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಜೊತೆ ನಾಯಕಿಯಾಗಿ ಸೋಶಿಯಲ್ ಮೀಡಿಯಾದ ಇನ್‌ಫ್ಲುಯೆನ್ಸರ್ ಆದ ಇಮಾನ್ ಎಸ್ಮೇಲ್ ನಟಿಸುತ್ತಿದ್ದಾರೆ.

ನಿರ್ದೇಶಕ ಹನು ರಾಘವಪುಡಿ ಹಾಗೂ ಪ್ರಭಾಸ್​ ಅವರ ಮುಂದಿನ ಚಿತ್ರದ ಲಾಂಚ್​ ಹೈದರಾಬಾದ್‌ನಲ್ಲಿ ನಡೀತು. ಪ್ರಭಾಸ್ ಜೊತೆಗೆ ಮೈತ್ರಿ ಮೂವಿ ಮೇಕರ್ಸ್ ಜೊತೆಗೂ ಸ್ಟಾರ್ ​ ನಿರ್ದೇಶಕ ಪ್ರಶಾಂತ್​ ನೀಲ್ ಮುಹೂರ್ತ ಕಾರ್ಯಕ್ರಮಕ್ಕೆ ಬಂದಿದ್ದು, ಶುಭ ಹಾರೈಸಿದ್ದಾರೆ. ಇನ್ನೂ ತಯಾರಕರು ಸಿನಿಮಾದ ಶೀರ್ಷಿಕೆಯನ್ನು ಘೋಷಿಸದಿದ್ದರೂ, ನಿರ್ಮಾಪಕರು, ಮೈತ್ರಿ ಮೂವಿ ಮೇಕರ್ಸ್, ಸಮಾರಂಭದ ಚಿತ್ರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಫೌಜಿ ಎಂದು ಹೆಸರಿಡಲಾಗಿದೆ ಎಂಬ ವದಂತಿಗಳೂ ಇವೆ.

ಈ ಸಿನಿಮಾದಲ್ಲಿ ಹಿರಿಯ ನಟರಾದ ಮಿಥುನ್ ಚಕ್ರವರ್ತಿ ಮತ್ತು ಜಯಪ್ರದಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ದೊಡ್ಡ ಬಜೆಟ್‌ನೊಂದಿಗೆ ಬೃಹತ್ ಕ್ಯಾನ್ವಾಸ್‌ನಲ್ಲಿ ಈ ಚಿತ್ರವನ್ನ ರಚಿಸಲಾಗುತ್ತಿದೆ. ಚಿತ್ರದಲ್ಲಿ ಒಂದು ಪೀರಿಯಡ್ ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಫ್ಯಾನ್ಸ್ ಅಂತು ಡಾರ್ಲಿಂಗ್ ಹೊಸ ಸಿನಿಮಾ ಶುರು ಮಾಡಿರುವುದಕ್ಕೆ ಸಖತ್​ ಖುಷಿಯಾಗಿದ್ದಾರೆ. ಮುಂದಿನ ವಾರವೇ ‘ಫೌಜಿ’ ಸಿನಿಮಾದ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದ್ದು, ‘ಫೌಜಿ’ ಎನ್ನುವ ಟೈಟಲ್‌ನಲ್ಲೇ ಫಿಕ್ಸ್ ಆಗುತ್ತಾ? ಅಥವಾ ಟೈಟಲ್ ಬದಲಾಗುತ್ತಾ ಅಂತ ಕಾದು ನೋಡಬೇಕಿದೆ. ಸದ್ಯ ವಿಷ್ಣು ಮಂಚು ಅವರ ಮುಂಬರುವ ಚಿತ್ರ ಕಣ್ಣಪ್ಪದಲ್ಲಿ ಪ್ರಭಾಸ್ ಶೀಘ್ರದಲ್ಲೇ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಕಾಜಲ್ ಅಗರ್ವಾಲ್ ಕೂಡ ನಟಿಸಿದ್ದಾರೆ. ನಟ ಪ್ರಸ್ತುತ ಮಾರುತಿ ಚಿತ್ರದಲ್ಲಿ ನಿಧಿ ಅಗರ್ವಾಲ್ ಕೂಡ ನಟಿಸಿದ್ದು, ಮಾಳವಿಕಾ ಮೋಹನ್ ಕೂಡ ನಟಿಸುತ್ತಿದ್ದಾರೆ. ಇದು ಮುಂದಿನ ವರ್ಷ ಏಪ್ರಿಲ್ 10 ರಂದು ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

*ಸ್ವಾತಿ.ಎಸ್.

- Advertisement -

Latest Posts

Don't Miss