ಮಂಡ್ಯದಲ್ಲಿ ಕಾಣೆಯಾಗಿದ್ದ ಬಾಲಾಜಿ ವಿಗ್ರಹ ತಮಿಳುನಾಡಿನಲ್ಲಿ ಪತ್ತೆ..!

ಚೆನ್ನೈ: ಮಂಡ್ಯ ಜಿಲ್ಲೆಯಿಂದ ಬಾಲಾಜಿ ವಿಗ್ರಹ ಕಳ್ಳತನ ಮಾಡಿ ತಮಿಳುನಾಡಿಗೆ ಕೊಂಡೊಯ್ದಿದ್ದರೆಂದು ರಾಜ್ಯ ವಿಗ್ರಹ ವಿಭಾಗದ ಸಿಐಡಿ ತಿಳಿಸಿದ್ದಾರೆ. ಕೇಂದ್ರ ವಲಯದ ಹೆಚ್ಚುವರಿ ಡಿಎಸ್ಪಿ ಬಾಲಮುರುಗನ್ ಮತ್ತು ಅವರ ಅಧಿಕಾರಿಗಳ ತಂಡ ವಿಗ್ರಹವನ್ನು(22 ಕೆ.ಜಿ ತೂಕ) ಪತ್ತೆ ಹಚ್ಚಿದ್ದು, ತಮಿಳುನಾಡಿನ ಗೋಬಿಚೆಟ್ಟಿಪಾಳ್ಯದ ಮನೆಯೊಂದರಲ್ಲಿ ವಶ ಪಡಿಸಿಕೊಂಡಿದ್ದಾರೆ.

ಆಕಸ್ಮಿಕ ಗುಂಡು ಹಾರಿ ಯೋಧ ಸಾವು

ಕೆಲ ವರ್ಷಗಳಿಂದ ಮಂಡ್ಯ ದೇವಸ್ಥಾನದ ಪೂಜಾರಿ ದೇವಾಲಯದಿಂದ ವಿಗ್ರಹವನ್ನು ಕದ್ದು, ಗೋಬಿಚೆಟ್ಟಿಪಾಳ್ಯದ ವಕೀಲರಿಗೆ ಮಾರಾಟ ಮಾಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ವೇಷಧರಿಸಿಕೊಂಡು ವಿಗ್ರಹ ಕಳ್ಳಸಾಗಣೆದಾರರಂತೆ ವಿಗ್ರಹ ಹುಡುಕಲು ಪ್ರಾರಂಭಿಸಿದ್ದರು. ನ.4 ರಂದು ಮಧ್ಯವರ್ತಿಯ ಮೂಲಕ ವಕೀಲರ ಮನೆಗೆ ತೆರಳಿ ವಿಗ್ರಹವನ್ನು ವಶಪಡಿಸಿಕೊಂಡು, ವಕೀಲರನ್ನು ಬಂಧಿಸಿದ್ದಾರೆ.

ನಟಿ ತಾರಾ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲು

About The Author