Banglore News : ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರ ಸಂವಾದದ ವೇಳೆ ಕೆಲವರು ಕಸ್ತೂರಿರಂಗನ್ ವರದಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ತಾವು ಯಾವುದೇ ಹಂತದಲ್ಲೂ “ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ’’ ಎಂದು ತಿಳಿಸಿರುವುದಿಲ್ಲ. ಇದು ತಿರುಚಿದ ಹೇಳಿಕೆ. ಈ ಬಗ್ಗೆ ಭಾನುವಾರವೇ ಬೀದರ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ತಾವು ಸ್ಪಷ್ಟೀಕರಣ ನೀಡಿದ್ದೇನೆ. ಸೋಮವಾರ ಮತ್ತೊಮ್ಮೆ ಸ್ಪಷ್ಟೀಕರಣ ಹೇಳಿಕೆ ಬಿಡುಗಡೆ ಮಾಡಿದ್ದು, ಇದು ಎಲ್ಲ ಮಾಧ್ಯಮದಲ್ಲೂ ಪ್ರಕಟವಾಗಿದೆ. ಹೀಗಿದ್ದೂ, ಬಿಜೆಪಿ ರಾಜಕೀಯ ದುರ್ಲಾಭಕ್ಕಾಗಿ ಮಂಗಳವಾರ ಪ್ರತಿಭಟನೆ ನಡೆಸಿರುವುದು ಅರ್ಥಹೀನ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಸಿ ಈಶ್ವರ ಖಂಡ್ರೆ ಹೇಳಿದರು.
ತಾವು ಅರಣ್ಯ ಇಲ್ಲದ ಪ್ರದೇಶದಿಂದ ಬಂದಿರಬಹುದು. ಆದರೆ ಹಸಿರಿನ ಮಹತ್ವ ತಮಗೆ ತಿಳಿದಿದೆ. ಅರಣ್ಯ ಸಚಿವನಾಗಿ ರಾಜ್ಯದ ಹಸಿರು ವ್ಯಾಪ್ತಿಯನ್ನು ಹೆಚ್ಚಿಸಲು ಶಕ್ತಿಮೀರಿ ಶ್ರಮಿಸುತ್ತಿದ್ದು, ಕಲ್ಯಾಣ ಕರ್ನಾಟಕವನ್ನು ಹಸಿರುಮಯಗೊಳಿಸಲು ಮುಂದಾಗಿದ್ದೇನೆ. ಈ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ ಜೊತೆಗೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇತ್ತು ಆಗ ಇವರು ಏಕೆ ಕಸ್ತೂರಿರಂಗನ್ ವರದಿಯನ್ನು ರದ್ದು ಮಾಡಲಿಲ್ಲ ಎಂದು ಪ್ರಶ್ನಿಸಿರುವ ಈಶ್ವರ ಖಂಡ್ರೆ, ಈಗಲೂ ಮಲೆನಾಡಿನ ಮತ್ತು ಕರಾವಳಿಯ ಬಿಜೆಪಿ ಶಾಸಕರು, ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಸ್ತೂರಿರಂಗನ್ ವರದಿಯನ್ನು ರದ್ದುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಈಗ ಕೇಂದ್ರ ಸರ್ಕಾರವೇ ನಿವೃತ್ತ ಐಎಫ್ಎಸ್ ಅಧಿಕಾರಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಎಲ್ಲ ಪಶ್ಚಿಮ ಘಟ್ಟದ ರಾಜ್ಯಗಳಿಗೆ ಅಧ್ಯಯನಕ್ಕೆ ಕಳಿಸಿದೆ, ವರದಿ ಜಾರಿಗೆ ಪಟ್ಟು ಹಿಡಿದಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Eshwar Khandre : ಗಾಂಧೀಜಿ ಹುಟ್ಟಿದ ನಾಡಿನಲ್ಲಿ ವರ್ಣಭೇದ ನೀತಿ ಪೋಷಿಸುತ್ತಿರುವ ಬಿಜೆಪಿ : ಈಶ್ವರ್ ಖಂಡ್ರೆ ಕಿಡಿ
Narendra Modi : ಗ್ಯಾರಂಟಿ ವಿಚಾರ ಮುಂದಿಟ್ಟೇ ಲೋಕ ಸಭೆ ಚುನಾವಣೆ ಎದುರಿಸುತ್ತೇವೆ : ಮೋದಿಗೆ ಸಿಎಂ ಸವಾಲು..!
DK Shivakumar : ಆರಗ ಜ್ಞಾನೇಂದ್ರ ರನ್ನು ನಿಮ್ಹಾನ್ಸ್ ಗೆ ಕಳಿಸೋಣ : ಡಿ ಕೆ ಶಿವಕುಮಾರ್