BSPL ಸ್ಥಾಪಿಸಿ ಇಲ್ಲವೇ ”ಸರ್ಕಾರೀ ನೌಕರಿ ಕೊಡಿ”

ಕೊಪ್ಪಳದ ಬಲ್ದೋಟ ಕಂಪನಿಗೆ ಭೂಮಿ ಕಳೆದುಕೊಂಡ ರೈತ ಮಕ್ಕಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಕೊಪ್ಪಳ ತಾಲೂಕಿನ ಹಾಲವರ್ತಿ, ತಿಡಿದಾಳ್, ಬೇವಿನಾಳ ಮತ್ತು ಕೊಪ್ಪಳ ಸುತ್ತ ಮುತ್ತಲಿನ ಭೂಮಿ ಕಳೆದುಕೊಂಡ ನಿರಾಶ್ರಿತ ರೈತ ಒಕ್ಕೂಟದಿಂದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಕಂಪನಿಯ ಸ್ಥಾಪನೆಗೆ ಸರ್ಕಾರದ ಮೂಲಕ ಭೂಮಿ ಕೊಟ್ಟು 18 ವರ್ಷವಾದರೂ ಕಂಪನಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗವನ್ನು ನೀಡುತ್ತಿಲ್ಲ, ಭೂಮಿಯನ್ನು ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. 359 ರೈತರ ಸುಮಾರು1034 ಎಕರೆ ಆಸ್ತಿಯನ್ನ ಸರ್ಕಾರವೇ ಬೆಲೆ ನಿಗದಿ ಮಾಡಿ ಕಡಿಮೆ ಬೆಲೆಗೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಒತ್ತಾಯಪೂರ್ವಕವಾಗಿ ಅಂದಿನ ಸರ್ಕಾರ ನಮ್ಮಿಂದ 2006 ರಲ್ಲಿ ಭೂಮಿಯನ್ನು ಕಸಿದುಕೊಂಡು ಉದ್ಯೋಗ ನೀಡುವುದಾಗಿ ಹೇಳಿತ್ತು. ನಮ್ಮ ಭೂಮಿ ಕಸಿದುಕೊಂಡಿದ್ದಕ್ಕೆ BSPL ಕಂಪನಿ ಸ್ಥಾಪಿಸಿ ನಮಗೆ ಉದ್ಯೋಗ ನೀಡಿ ಇಲ್ಲವೇ ಸರಕಾರಿ ನೌಕರಿಯನ್ನು ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ BSPL ಕಂಪನಿಗೆ ಭೂಮಿ ಕಳೆದುಕೊಂಡ ರೈತರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಮತ್ತು ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿ ಮತ್ತು ಜನಪ್ರತಿಗಳನ್ನು ಜನಪ್ರತಿನಿಧಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

About The Author