International news: ರಿಯಲ್ ಎಸ್ಟೇಟ್ ಅನ್ನು ಸುಧಾರಣೆಗೆ ತರುವ ಹೆಸರಿನಲ್ಲಿ ಚೀನಾ ತಂದಿರುವ ಕಾನೂನು ಈಗ ರಿಯಲ್ ಎಸ್ಟೇಟ್ ವ್ಯವಹಾರದ ಬುಡವನ್ನೇ ಅಲುಗಾಡಿಸಿದೆ. ಆ ನಿಯಮ ಏನೆಂದರೆ ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾಡಬಹುದಾದ ಸಾಲಕ್ಕೆ ಮಿತಿ ಹಾಕುವುದಾಗಿತ್ತು ಅ ಒಂದು ನಿಯಮ ಜಾರಿಯಾದಾಗಿನಿಂದ ಅದೆಷ್ಟೋ ರಿಯಲ್ ಎಸ್ಟೆಟ್ ಸಂಸ್ಥೆಗಳು ಮಕಾಡೆ ಮಲಗಿದವು
ಇನ್ನು ಈ ಕಂಪನಿಗಳಿಗೆ ಆಗಿರುವ ನಷ್ಟದ ಬಗ್ಗೆ ಹೇಳುವುದಾದರೆ ಚೀನಾದ ರಿಯಲ್ ಎಸ್ಟೇಟ್ ಸಂಸ್ಥೆಯಾದ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ ಎನ್ನುವ ಕಂಪನಿಗೆ ಲಾಭದಲ್ಲಿ ಬರೋಬ್ಬರಿ ಶೇ 96 ರಷ್ಟು ಇಳಿಕೆ ಕಂಡಿದೆ. ಚೀನಿ ಬಿಲ್ಡರ್ಸ್ ಎವರ್ ಗ್ರಾಂಡ್ ಸಂಸ್ಥೆ 2 ವರ್ಷದಲ್ಲಿ 81 ಬಿಲಿಯನ್ ಡಾಲರ್ ನಷ್ಟ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಇನ್ನು ಈ ಎವರ್ ಗ್ರಾಂಡ್ ಕಂಪನಿ ಮಾಡಿಕೊಂಡಿರುವ ಸಾಲದ ಬಗ್ಗೆ ಹೇಳುವುದಾದರೆ 300 ಬಿಲಿಯನ್ ಡಾಲರ್ (24 ಲಕ್ಷ ಕೋಟಿ) ಸಾಲ ಮಾಡಿಕೊಂಡಿದೆ.ಕಳೆದ ಎರಡು ವರ್ಷದಲ್ಲಿ ಆಗಿರುವ ಆಧಾಯವು 2021 ರಲ್ಲಿ 1.2 ಬಿಲಿಯನ್ ಡಾಲರ್ ಅಂತರಾಷ್ಟ್ರೀಯ ಸಾಲಕ್ಕೆ ಬಡ್ಡಿ ಕಟ್ಟಲು ಸಾಧ್ಯವಾಗಿತ್ತಿಲ್ಲ . ಷೇರು ಪೇಟೆಯ ಪಟ್ಟಿಯಿಂದ ಎವರ್ ಗ್ರಾಂಡ್ ಕಂಪನಿಯ ಹೆಸರನ್ನು ತೆಗೆದು ಹಾಕಲಾಗಿದೆ.