Saturday, July 27, 2024

Latest Posts

ಕಾಂಗ್ರೆಸ್ ಪಕ್ಷದಲ್ಲಿರುವ ಪ್ರತಿಯೊಬ್ಬರಲ್ಲಿ ರಕ್ತದಲ್ಲಿ ಕಣದಲ್ಲಿ ಬಸವತತ್ವ ಇದೆ: ಶಾಸಕ ಶ್ರೀನಿವಾಸ್ ಮಾನೆ

- Advertisement -

Hubli News: ಹುಬ್ಬಳ್ಳಿ: ನೇಹಾ ಸಾವಿನಲ್ಲಿ ಅನ್ಯ ಕೋಮಿನ ಯುವಕ ಭಾಗಿಯಾಗಿರುವ ಕಾರಣಕ್ಕೆ ಚುನಾವಣೆ ಹತ್ತಿರವಿರುವದಕ್ಕೆ ಸಾವಿನ ಮೇಲೆ ರಾಜಕಾರಣ ಮಾಡಿ ಗೆಲ್ಲುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಎಲ್ಲರ ಜವಾಬ್ದಾರಿ ಇರುತ್ತದೆ. ಅಂತರಾಳದಲ್ಲಿ ಮಾನವೀಯತೆ ಇಟ್ಟುಕೊಂಡು, ಸಂತ್ರಸ್ತ ಕುಟುಂಬಕ್ಕೆ ಶಕ್ತಿ ಕೊಟ್ಟು, ಅವರ ಜೊತೆಗೆ ಇರಬೇಕು. ಈ ಸಮಯದಲ್ಲಿ ಸಾವಿನ ಲಾಭ ಪಡೆಯುವುದು ತಪ್ಪು ಎಂದರು.

ನೇಹಾ ಕೊಲೆ ವೈಯಕ್ತಿಕ ಹಿನ್ನೆಲೆಯಲ್ಲಿ ನಡೆದಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಸಿಎಂ ಕೂಡಾ ಇಂತಹ ಘಟನೆಗಳು ವೈಯಕ್ತಿಕ ಕಾರಣದಿಂದ ನಡೆದಿರಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವೈಯಕ್ತಿಕ ಅಜೆಂಡಾ ಎಂಬುದು ಎರಡು ಸೈಡ್ ಇರಬೇಕೆಂದಿಲ್ಲ, ಒನ್ ಸೈಡ್ ಕೂಡಾ ಇರಬಹುದು, ಅವನಿಗೆ ಸಿಗದೇ ಇರೋದಕ್ಕೆ ಅವರು ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕೊಲೆ ಮಾಡಿರಬಹುದು, ವೈಯಕ್ತಿಕ ಅಂತಾ ಹೇಳಿದರೇ ಸಂತ್ರಸ್ತ ಕುಟುಂಬಕ್ಕೆ ಅವಮಾನ ಮಾಡಿದ ಹಾಗೇ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸಾವಿನಲ್ಲಿ ಕೋಲುಗಳನ್ನು ತಂದು ರಾಜಕಾರಣ ಮಾಡಬಾರದು. ಪೋಲಿಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆಯನ್ನು ಈ ಸಂದರ್ಭದಲ್ಲಿ ಧೈರ್ಯದಿಂದ ಹೇಳಬೇಕಾಗುತ್ತದೆ. ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್ ತುಷ್ಟಿಕರಣದಿಂದ ಇಂತಹ ಘಟನೆಗಳು ನಡೆಯುತ್ತವೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲಿರುವ ಪ್ರತಿಯೊಬ್ಬರಲ್ಲಿ ರಕ್ತದಲ್ಲಿ ಕಣದಲ್ಲಿ ಬಸವತತ್ವ ಇದೆ. ಬಸವತತ್ವ ಇರದೇ ಇರುವವರು ಕಾಂಗ್ರೆಸ್ ಹೊರಗಡೆ ಇದ್ದಾರೆ. ಇಂತಹ ಕೃತ್ಯಕ್ಕೆ ಯಾರು ಪ್ರೋತ್ಸಾಹ ಕೊಡುವುದಿಲ್ಲ. ಅಂಜುಮನ್ ಸಂಸ್ಥೆ ಕೂಡಾ ನೇಹಾ ಬೆನ್ನಿಗೆ ನಿಂತಿದೆ. ಅಷ್ಟೇ ಅಲ್ಲದೇ ಮುನವಳ್ಳಿಯ ಮುಸ್ಲಿಂ ಸಮೂದಾಯ ಫಯಾಜ್ ಕುಟುಂಬದ ರಕ್ಷಣೆ ಮಾಡಿಲ್ಲ, ನೇಹಾಳಿಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡುತ್ತಿದೆ ಎಂದು ಶ್ರೀನಿವಾಸ ಮಾನೆ ಹೇಳಿದರು.

ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು: ಚಕ್ರವರ್ತಿ ಸೂಲಿಬೆಲೆ

ಲವ್ ಜಿಹಾದ್‌ಗೆ ದೇಶದಲ್ಲಿ ತರಬೇತಿ ಕೇಂದ್ರವಿರಬೇಕು ಅನಿಸುತ್ತಿದೆ‌: ಜಗದೀಶ್ ಶೆಟ್ಟರ್

ಕಾಂಗ್ರೆಸ್ 28 ಸ್ಥಾನ ಸೋತರೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಖುಷಿ: ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss