ರಾಜ್ಯದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ದಾಖಲೆ ಸಮೇತ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ನಾವು 16 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ, ಆಂತರಿಕ ಸಮೀಕ್ಷೆ ಹೇಳಿತ್ತು. ಆದರೆ ನಾವು 9 ರಲ್ಲಿ ಗೆದ್ದೆವು. 7 ರಲ್ಲಿ ಅನಿರೀಕ್ಷಿತವಾಗಿ ಜಯವನ್ನ ಕಳೆದುಕೊಂಡೆವು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲೂ ಅಕ್ರಮ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ, 6.26 ಲಕ್ಷ ಮತಗಳು ಚಲಾವಣೆಯಾಗಿವೆ. ಬಿಜೆಪಿ 6,58,915 ಮತ ಪಡೆದು, 32,707 ಮತಗಳ ಅಂಚಿನಲ್ಲಿ ಗೆಲುವು ಪಡೆದಿತ್ತು. ಬಳಿಕ ಮಹದೇವಪುರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 1,15,586 ವೋಟ್ ಪಡೆದಿತ್ತು. ಬಿಜೆಪಿ 2,29,632 ಮತ ಪಡೆದಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಮಹದೇವಪುರ ಒಂದನ್ನು ಬಿಟ್ಟು , ಉಳಿದೆಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಿಕ್ಕಿದೆ. ನಾವು ಪರಿಶೀಲಿಸಿದಾಗ, 1,00,250 ಮತಗಳ್ಳತನ ಆಗಿರೋದು ಪತ್ತೆಯಾಗಿದೆ.
11 ಸಾವಿರ ಜನರಿಂದ ಅಕ್ರಮ ಮತದಾನ ನಡೆದಿದೆ. ಮಹದೇವಪುರದಲ್ಲಿ ಮನೆ ಸಂಖ್ಯೆ 0 ಎಂದು ನಮೂದಿಸಿಕೊಂಡಿರುವ ಮತದಾರರೂ ಇದ್ದಾರೆ. ಒಂದು ಪ್ರಕರಣದಲ್ಲಿ 46 ಮತದಾರರು, ಒಂದೇ ಅಡ್ರೆಸ್ ಹೊಂದಿದ್ದಾರೆ. ಆ ವಿಳಾಸಕ್ಕೆ ಭೇಟಿ ಕೊಟ್ಟು ನೋಡಿದಾಗ, ಯಾರೂ ಅಲ್ಲಿ ಇರಲಿಲ್ಲ. 33 ಸಾವಿರ ಮತದಾರರಿಗೆ ಸಂಬಂಧಪಟ್ಟಂತೆ, ಸೂಕ್ತ ಮಾಹಿತಿ ಇಲ್ಲ. ಕೆಲವು ಚುನಾವಣಾ ಗುರುತಿನ ಚೀಟಿಯಲ್ಲಿ, ತಂದೆಯ ಹೆಸರೇ ಇಲ್ಲ. ನಕಲಿ ವಿಳಾಸ ಇದೆ. ಸೂಕ್ತ ಮಾಹಿತಿಯೇ ಇಲ್ಲ.
ಗುರುಕಿರತ್ ಸಿಂಗ್ ದಂಗ್ ಎಂಬಾತ, ಮಹದೇವಪುರದ 4 ಬೂತ್‌ಗಳಲ್ಲಿ ಗುರುತಿನ ಚೀಟಿ ಹೊಂದಿದ್ದಾನೆ. ಇಂತಹ ಸಾವಿರಾರು ಉದಾಹರಣೆಗಳು ಇವೆ. ಆದಿತ್ಯ ಶ್ರೀ ವಾಸ್ತವ್ಯ ಎಂಬಾತ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲೂ, ಮತದಾನದ ಹಕ್ಕು ಹೊಂದಿದ್ದಾನೆ. ಹೀಗಂತ ಸಾಕ್ಷಿ ಸಮೇತ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.