ಶೀಘ್ರವೇ ಬಿಜೆಪಿ ಮಾಜಿ ಸಿಎಂ ಅಶ್ಲೀಲ ಸಿಡಿ ಹೊರಗೆ ಬೀಳಲಿದೆ: ಆನಂದ್ ನ್ಯಾಮಗೌಡ ಸ್ಪೋಟಕ ಹೇಳಿಕೆ

Bagalakote News: ಬಾಗಲಕೋಟೆ: ಬಾಗಲಕೋಟೆಯ ಜಮಖಂಡಿಯಲ್ಲಿ ಮಾಜಿ ಶಾಸಕ ಆನಂದ್ ನ್ಯಾಮಗೌಡ ಸ್ಪೋಟಕ ಹೇಳಿಕೆ ನೀಡಿದ್ದು, ಶೀಘ್ರವೇ ಬಿಜೆಪಿ ಮಾಜಿ ಸಿಎಂ ಅಶ್ಲೀಲ ಸಿಡಿ ಹೊರಗೆ ಬೀಳಲಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರವಾಗಿ ಜಮಖಂಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಮಾಜಿ ಶಾಸಕ ಆನಂದ ನ್ಯಾಮಗೌಡ ಹೊಸ ಬಾಂಬ್ ಸಿಡಿಸಿದ್ದು, ಬಿಜೆಪಿ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೋ ಬಿಡುಗಡೆ ಆಗಲಿದೆ. ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಇವತ್ತೇ ಆ ಸುದ್ದಿ ಕೇಳಿದ್ದೇನೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಅವರ ಅಶ್ಲೀಲ ಸಿಡಿ ಹೊರಗೆ ಬರೋದಿದೆ. ಆ ಅಶ್ಲೀಲ ಸಿಡಿ ಭಾರತೀಯ ಜನತಾ ಪಾರ್ಟಿಯವನದ್ದೇ ಎಂದು ನ್ಯಾಮಗೌಡ ಹೇಳಿದ್ದಾರೆ.

About The Author