Monday, April 14, 2025

Latest Posts

ಏಕಾಂಗಿ ಸಿದ್ದರಾಮಯ್ಯ..!?

- Advertisement -

ಕರ್ನಾಟಕ ಟಿವಿ ಸಂಪಾದಕೀಯ : ದೇವರಾಜ ಅರಸು 5 ವರ್ಷ ಅಧಿಕಾರ ಪೂರೈಸಿದ ನಂತರ ಮತ್ತೊಬ್ಬ ಸಿಎಂ 5 ವರ್ಷ ಅಧಿಕಾರ ಪೂರ್ಣಗೊಳಿಸಲು 40 ವರ್ಷ  ಬೇಕಾಯ್ತು.. ಹೌದು ದೇವರಾಜ ಅರಸು ನಂತರ ಸಿದ್ದರಾಮಯ್ಯ ಮಾತ್ರ 5 ವರ್ಷ ಸುಭದ್ರ ಸರ್ಕಾರ ಕೊಟ್ಟು ಐದು ವರ್ಷ ಪೂರೈಸಿದ ನಾಯಕ.. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಸುಭದ್ರ ಸರ್ಕಾರ ನೀಡಲು 40  ಬೇಕಾಯ್ತು.. ಅದು ಸಿದ್ದರಾಮಯ್ಯ ಮೂಲಕ ಸಾಧ್ಯವಾಯ್ತು.. ಆದ್ರೀಗ ಕಳೆದೊಂದು ವಾರದಿಂದ ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ನೋಡಿದ್ರೆ ಸಿದ್ದರಾಮಯ್ಯ ಮೂಲೆಗುಂಪಾದ್ರಾ ಅನ್ನುವ ಅನುಮಾನ ಕಾಡ್ತಿದೆ.. ಯಾಕಂದ್ರೆ, ಸ್ವತಂತ್ರವಾಗಿ ಒಂದು ಎಂಎಲ್ ಎ ಚುನಾವಣೆ ಗೆಲ್ಲಲಾಗದವರೆಲ್ಲಾ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಗಳು.. ಈ ರೀತಿ ಪ್ರಭಾವಿಗಳು ಅಂತ ಬಿಂಬಿಸಿಕೊಂಡವರು ಇದೀಗ ತಮ್ಮ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ವಿರುದ್ಧವೇ ಪ್ರತಿಭಟನೆ ಮಾಡಿಸಿ ಕರ್ನಾಟಕದಲ್ಲಿ ಸುಭದ್ರ ಸರ್ಕಾರ ಕೊಟ್ಟ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಇರಿಸು ಮುರಿಸು ಉಂಟು ಮಾಡಿದ್ದಾರೆ.

ಸಿದ್ದು ಸಿಎಂ ಆಗಿದ್ದಾಗ ಸೈಲೆಂಟ್.. ಇವಾಗ ಫುಲ್  ರೆಬಲ್ಸ್..

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೈಕಮಾಂಡ್ ಮುಂದೆ ದಲಿತ ಸಿಎಂ ದಾಳ ಉರುಳಿಸಿ ಎಷ್ಟೇ ಪ್ರಯತ್ನ ಮಾಡಿದ್ರು ಅವರನ್ನ ಏನೂ ಮಾಡಲು ಆಗಿರಲಿಲ್ಲ. ಸಿದ್ದರಾಮಯ್ಯ 2018ರ ಚುನಾವಣೆಗೂ ಮೊದಲು ನಿವೃತ್ತಿ ಘೋಷಣೆ ಮಾಡಿದ್ರು. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ಕಾಡಿಬೇಡಿ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಾಡಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು.. ಆದ್ರೀಗ ಸಿದ್ದರಾಮಯ್ಯ ವಿರುದ್ಧ ಪಕ್ಷದಲ್ಲಿನ ಕೆಲ ನಾಯಕರ ಮಾತುಗಳನ್ನಗಣನೆಗೆ ತೆಗೆದುಕೊಳ್ತಿರುವ ಹೈ ಕಮಾಂಡ್ ಸಿದ್ದರಾಮಯ್ಯ ಮಾತಿಗೆ ಕ್ಯಾರೆ ಅಂತಿಲ್ಲ.. ಸಿದ್ದರಾಮಯ್ಯ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸೈಲೆಂಟಾಗಿ ಮೈಸೂರಿನ ಮನೆ ಸೇರಿಕೊಂಡಿದ್ದಾರೆ.. ಸಿದ್ದರಾಮಯ್ಯ ಮೌನ ಸಹ ಕಾಂಗ್ರೆಸ್ ಹೈಕಮಾಂಡ್ ಗೆ ಆತಂಕ ಉಂಟು ಮಾಡಿದೆ. ಯಾಕಂದ್ರೆ, ಸಿದ್ದರಾಮಯ್ಯ ತನಗೆ ಗೌರವ ಸಿಗದ ಕಾರಣ ಜೆಡಿಎಸ್ ತೊರೆದು ಅಹಿಂದ ಸ್ಥಾಪಿಸಿ ಬಲ ಪ್ರದರ್ಶನ ಮಾಡಿದ್ದು ಇನ್ನು ಎಲ್ಲರಿಗೂ ನೆನಪಿದೆ.. ಈ ಕಾರಣಕ್ಕಾಗಿಯೇ ಹೈಕಮಾಂಡ್ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರನ್ನ ಘೋಷಣೆ ಮಾಡದೆ ಮೀನಾಮೇಷ ಎಣಿಸುತ್ತಿದೆ.. ಸಿದ್ದರಾಮಯ್ಯ ತಮ್ಮಅಂತಿಮ ನಿರ್ಧಾರವನ್ನ ಹೈಕಮಾಂಡ್ ಗೆ ತಿಳಿಸಿ ಮೌನವಾಗಿ ಬಿಟ್ಟಿದ್ದಾರೆ.. ಈಗ ಸಿದ್ದರಾಮಯ್ಯ ಸುತ್ತಾ ತಿರುಗಾಡುತ್ತಿದ್ದವರು ಸಹ ಡಿಕೆ ಶಿವಕುಮಾರ್ ಬೆಂಬಲಿಸಲಾಗದೆ.. ಡಿಕೆಶಿ ವಿರೋಧಿಸಲಾಗದೆ ಸೈಲೆಂಟ್ ಆಗಿ ಬಿಟ್ಟಿದ್ದಾರೆ.. ಸಿದ್ದರಾಮಯ್ಯ ಸಹ ಈಶ್ವರಪ್ಪ, ವಿಶ್ವನಾಥ್ ಜೊತೆ ವೇದಿಕೆ ಹಂಚಿಕೊಂಡು ರಾಜಕಾರಣದಲ್ಲಿ ಎಲ್ಲವೂ ಸಾಧ್ಯ ಅನ್ನೋದನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ.. ಸಿದ್ದರಾಮಯ್ಯಗೆ ಗೌರವಯುತ ಬೀಳ್ಕೊಡುಗೆ ಕೊಟ್ರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲುವಿನ ದಡ ಮುಟ್ಟಬಹುದೇನೋ.. ಇಲ್ಲದಿದ್ರೆ ಸಿದ್ದರಾಮಯ್ಯ ಸಿಟ್ಟು ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ದುಬಾರಿಯಾಗಬಹುದು..

https://www.youtube.com/watch?v=WZxDEAEyH-4

ವೀಕ್ಷಕರೇ.. ಸದ್ಯಕ್ಕೆ ಸಿದ್ದರಾಮಯ್ಯಗೆ ಕಾಂಗ್ರೆಸ್ ಪಕ್ಷ ಅನಿವಾರ್ಯನಾ..? ಅಥವಾ ಕಾಂಗ್ರೆಸ್ ಗೆ ಸಿದ್ದರಾಮಯ್ಯ ಅನಿವಾರ್ಯಾನಾ..? ಕಾಮೆಂಟ್ ಮಾಡಿ..

- Advertisement -

Latest Posts

Don't Miss