Monday, December 11, 2023

Latest Posts

ಬ್ರೇಕಿಂಗ್ ನ್ಯೂಸ್ : ಜೆಡಿಎಸ್ ಗೆ ಗುಡ್ ಬೈ ಹೇಳಿದ ಮಾಜಿ ಸಚಿವ

- Advertisement -

ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಜೆಡಿಎಸ್ ಗೆ ಒಂದರಮೇಲೊಂದು ಶಾಕಿಂಗ್ ನ್ಯೂಸ್ ಸಿಗ್ತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ದೋಸ್ತಿ ಖತಂ ಹಿನ್ನೆಲೆ ಜೆಡಿಎಸ್ ಗೆ ಗುಡ್ ಬೈ

ಇನ್ನು ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದಿದ್ರೂ ಜೆಡಿಎಸ್ 8 ಕ್ಷೇತ್ರಗಳನ್ನ ಕಾಂಗ್ರೆಸ್ ಬಳಿ ಗುದ್ದಾಡಿ ಪಡೆದುಕೊಂಡಿತ್ತು. ನಂತರ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸಿಗದೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದ್ರು. ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಕತೆ ಕೂಡ ಹೀಗೆ ಆಗಿತ್ತು. ನಂತರ ಕಾಂಗ್ರೆಸ್ ನಲ್ಲಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕರೆತಂದು ಟಿಕೆಟ್ ನೀಡಿದ್ರು. ಆದ್ರೆ ಚುನಾವಣೆಯಲ್ಲಿ ಸೋಲುಕಂಡ್ರು.. ಇದೀಗ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಪ್ರಮೋದ್ ಜೆಡಿಎಸ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ರೆ ಉಡುಪಿಯಲ್ಲಿ ಠೇವಣಿ ಬರೋದು ಕಷ್ಟ‌. ಹೀಗಾಗಿ ಜೆಡಿ ಎಸ್ ಪಕ್ಷಕ್ಕೆ ಇಂದು ಗುಡ್ ಬೈ ಹೇಳಿದ್ದಾರೆ. ಪಕ್ಷ ತ್ಯಜಿಸುತ್ತಿರೋದಾಗಿ ಪತ್ರ ಮೂಲಕ ಕುಮಾರಸ್ವಾಮಿ ಗೆ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

- Advertisement -

Latest Posts

Don't Miss