Sunday, September 15, 2024

Latest Posts

‘ಸಿದ್ದಾರ್ಥ್ ನಾಪತ್ತೆ ಒಂದು ದುರಂತ’- ಮಾಜಿ ಪ್ರಧಾನಿ ದೇವೇಗೌಡ ಬೇಸರ

- Advertisement -

ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗಿರೋದು ಒಂದು ದುರಂತ ಅಂತ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಎಸ್.ಎಂ ಕೃಷ್ಣಾ ಅಳಿಯ, ಉದ್ಯಮಿ ಸಿದ್ಧಾರ್ಥ್ ನಾಪತ್ತೆ ಬಳಿಕ ಮಾಜಿ ಸಿಎಂ ಎಸ್.ಎಂ ಕೃಷ್ಣಾ ನಿವಾಸಕ್ಕೆ ಗಣ್ಯರ ದಂಡೇ ಹರಿದು ಬರುತ್ತಿದ್ದು ಕೃಷ್ಣಾರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇನ್ನು ದೇವೇಗೌಡರೂ ಕೂಡ ಭೇಟಿ ಮಾಡಿ ಸಾಂತ್ವನ ಹೇಳಿದ್ರು. ಬಳಿಕ ಮಾತನಾಡಿದ ದೇವೇಗೌಡ, ಸಿದ್ಧಾರ್ಥ್ ನಾಪತ್ತೆಯಾಗಿರೋದು ಒಂದು ದುರಂತ. ನನಗೂ ಅವರಿಗೂ 35 ವರ್ಷಗಳ ಪರಿಚಯವಿದೆ. ಸಿದ್ಧಾರ್ಥ್ ಒಬ್ಬ ಒಳ್ಳೇ ಹುಡುಗ. ಇನ್ನು ಮಾಜಿ ಸಿಎಂ ಕೃಷ್ಣಾ ನನಗಿಂತಲೂ 1 ವರ್ಷಷ ಹಿರಿಯರು ಈಗ ಅವರು ಈ ನೋವನ್ನು ಸಹಿಸಿಕೊಳ್ಳಬೇಕಾಗಿರುವ ಪರಿಸ್ಥಿತಿ ಬಂದಿದೆ. ನಾನು ಅವರನ್ನು ಭೇಟಿಯಾಗಿ ಧೈರ್ಯ ತುಂಬಿ ಬಂದಿದ್ದೇನೆ ಅಂತ ದೇವೇಗೌಡರು ಹೇಳಿದ್ರು.

ಇನ್ನು ಉದ್ಯಮಿ ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದ್ದ ಐಟಿ ಡಿಜಿ ಕಿರುಕುಳದ ಕುರಿತಾಗಿ ಪ್ರತಿಕ್ರಿಯಿದ ದೇವೇಗೌಡರು, ಐಟಿ ದಾಳಿ ಆಗುತ್ತಿರುವ ರೀತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದನ್ನು ನೀವೇ ವಿಶ್ಲೇಷಣೆ ಮಾಡಿ ಅಂತ ಐಟಿ ಇಲಾಖೆ ದಾಳಿಯ ಕುರಿತಾಗಿ ಮಾರ್ಮಿಕವಾಗಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

- Advertisement -

Latest Posts

Don't Miss