ಬೆಂಗಳೂರು: ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಕಾಪಿ ಚೀಟಿ ತಂದಿದ್ದಳೆಂದು ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾಳೆ. ಒಎಂಬಿಆರ್ ಲೇಔಟ್ ನ ದೊಡ್ಡ ಬಾಣಸವಾಡಿಯ ಮರಿಯಂ ನಿಲಯ ಇಂಗ್ಲೀಷ್ ಸ್ಕೂಲ್ ನಲ್ಲಿ ಘಟನೆ ನಡೆದಿದೆ. ಮೃತ ವಿದ್ಯಾರ್ಥಿ ಅಮೃತಾ ಎಸ್ಎಸ್ಎಲ್ ಸಿ ಓದುತ್ತಿದ್ದಳು, ಕ್ಲಾಸ್ ಟೆಸ್ಟ್ ವೇಳೆ ಕಾಪಿ ಚೀಟಿ ಮಾಡಿ ಸಿಕ್ಕಿಬಿದ್ದಿದ್ದಳು. ಇದೇ ವಿಷಯವನ್ನು ಶಿಕ್ಷಕಿ ಶಾಲಿನಿ ಅನೇಕ ಬಾರಿ ಕ್ಲಾಸಿನಲ್ಲಿ ವಿದ್ಯಾರ್ಥಿನಿಯನ್ನು ನಿಂದಿಸಿದ್ದಾಳೆ.
ಮಂಡ್ಯ ರೈತರ ಅಹೋರಾತ್ರ ಧರಣಿಯಲ್ಲಿ ಇಂದು ಸಿದ್ದರಾಮಯ್ಯ ಭಾಗಿ
ಮನನೊಂದ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಲ್ ಕೆಜಿಯಿಂದಲೂ ಇದೇ ಶಾಲೆಯಲ್ಲಿಅಮೃತಾ ಓದುತ್ತಿದ್ದಳು ಎನ್ನಲಾಗಿದೆ. ಇತ್ತ ಶಾಲಾ ಆವರಣದಲ್ಲಿ ಅಮೃತಾ ದೇಹವನ್ನಿಟ್ಟುಕೊಂಡು ಪೋಷಕರು ಇದ್ದೊಬ್ಬ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಪ್ರತಿಭಟನೆ ಮಾಡಿದರು. ಮಗಳ ಸಾವಿಗೆ ಶಿಕ್ಷಕಿ ಶಾಲನಿಯೇ ಕಾರಣ ಎಂದು ಆರೋಪಿಸಿದರು. ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಅಂತಿಮ ನಮನ ಸಲ್ಲಿಸಿದರು. ಇನ್ನು ಶಾಲೆ ಪ್ರಿನ್ಸಿಪಲ್ ಐರಿನ್ ಮಾತನಾಡಿ ಘಟನೆ ಬಗ್ಗೆ ನನಗೆ ಬೆಳಿಗ್ಗೆ ತಿಳಿಯಿತು ಶಿಕ್ಷಕಿ ಶಾಲಿನಿ ವಿದ್ಯಾರ್ಥಿನಿಗೆ ಕಾಪಿ ಮಾಡಬಾರದೆಂದು ಬುದ್ಧಿ ಹೇಳಿದ್ದಾರೆ. ವಿದ್ಯಾರ್ಥಿನಿ ಕಾಪಿ ಮಾಡಿರುವುದಕ್ಕೆ ನಮ್ಮಲ್ಲಿ ದಾಖಲೆ ಇದೆ ಎಂದು ಹೇಳಿದರು.
ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಹೀಗೆ ಮಾಡಿದರೆ..ನಿಮ್ಮ ಕೈಗಳು ಸುರಕ್ಷಿತ..!
ಮಹೇಶ್ ಬಾಬು ತಂದೆ ಮತ್ತು ಸೂಪರ್ ಸ್ಟಾರ್ ಕೃಷ್ಣ ಆಸ್ಪತ್ರೆಗೆ ದಾಖಲು..!