ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂಬ ಆರೋಪ ಮಾಡಿರುವ ಅನಾಮಿಕ ದೂರುದಾರನ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಆತನು ಜೊತೆಯಲ್ಲಿ ಕೆಲಸ ಮಾಡಿದ್ದ ಜತೆಗಾರ ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದ ಹಾಗೂ ಸದ್ಯ, ಕೆ.ಹೊನ್ನಲಗೆರೆ ನಿವಾಸಿ ರಾಜು ಹೇಳಿದ್ದಾರೆ.
ನಾನು ಧರ್ಮಸ್ಥಳದಲ್ಲಿ 8 ವರ್ಷಗಳ ಕಾಲ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸಿದ್ದೆ. ಆ ಸಮಯದಲ್ಲಿ ದೂರುದಾರನಾಗಿ ಬಿಂಬಿತನಾಗಿರುವ ವ್ಯಕ್ತಿಯೂ ನನ್ನೊಂದಿಗೆ ಇದ್ದ. ಆದರೆ ಈಗ ಅವನು ಕೇಳಿಬರುತ್ತಿರುವ ಎಲ್ಲಾ ಆರೋಪಗಳು ಸುಳ್ಳು, ಧರ್ಮಸ್ಥಳ ಪ್ರಕರಣ ಸಂಬಂಧ ಹಲವು ಊಹಾಪೋಹಗಳಿಗೆ ದೂರುದಾರ ಬಣ್ಣ ಹಚ್ಚಿದ್ದಾನೆ ಎಂದು ರಾಜು ಆರೋಪಿಸಿದರು.
ರಾಜು ಮತ್ತಷ್ಟು ಗಂಭೀರ ಆರೋಪ ಮಾಡಿದ್ದು, ಅನಾಥ ಶವಗಳ ಮೇಲೆ ಇರುವ ಚಿನ್ನಾಭರಣಗಳನ್ನು ಶವ ಸಂಸ್ಕಾರಕ್ಕೂ ಮೊದಲು ಅವರೇ ತೆಗೆಯುವುದನ್ನು ನಾನು ನೋಡಿದ್ದೇನೆ. ನೇತ್ರಾವತಿ ನದಿಯಲ್ಲಿ ಪತ್ತೆಯಾಗುವ ಅಥವಾ ಧರ್ಮಸ್ಥಳದ ಅರಣ್ಯ ಪ್ರದೇಶಗಳಲ್ಲಿ ನೇಣು ಬಿಗಿದು ಪತ್ತೆಯಾಗುವ ಶವಗಳನ್ನು ಪೊಲೀಸರು ಮಹಜರು ಮಾಡಿದ ಬಳಿಕ ಧರ್ಮಸ್ಥಳದ ಸಿಬ್ಬಂದಿ ಸಂಸ್ಕಾರ ಮಾಡುತ್ತಿದ್ರು. ಈ ವೇಳೆ ದೂರುದಾರ ಚಿನ್ನಾಭರಣ ತೆಗೆಯುತ್ತಿದ್ದ ಎಂದು ಆರೋಪಿಸಿದ್ದಾರೆ.
ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮ ಸ್ಥಳಕ್ಕೆ ಕರೆದೊಯ್ದ ಪೊಲೀಸರು ನನ್ನಿಂದ ಕೆಲ ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದಾನೆ. ನಾನು ಈಗ ಖಾಸಗಿ ಸಂಸ್ಥೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಪ್ರಕರಣಕ್ಕೂ ನನಗೂ ಯಾವುದೇ ನೇರ ಸಂಬಂಧವಿಲ್ಲ.
ಕಳೆದ 8 ವರ್ಷಗಳ ಹಿಂದೆ ಧರ್ಮಸ್ಥಳದಿಂದ ವಾಪಸ್ ಆದ ನಾನು ಕೆ. ಹೊನ್ನಲಗೆರೆ ಸಮೀಪದ ಖಾಸಗಿ ಸಂಸ್ಥೆಯೊಂದರಲ್ಲಿ, ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ. ಒಟ್ನಲ್ಲಿ ಅನಾಮಿಕ ಹೇಳಿದ್ದೆಲ್ಲಾ ಸುಳ್ಳಾ ಅನ್ನೋ ಅನುಮಾನ ಶುರುವಾಗಿದೆ. ತನಿಖೆಯಿಂದ ಮಾತ್ರ ಸತ್ಯ ಹೊರಬರಬೇಕಿದೆ



