Tuesday, January 14, 2025

Latest Posts

ಸಮಸ್ಯೆಗಳ ಸರಮಾಲೆ ಇದ್ದರೂ ಎಕ್ಸಪ್ರೆಸ್ ಹೈವೆ

- Advertisement -

bengalore news

ನೋಡೋಕೆ ಚೆನ್ನಾಗಿ ಕಾಣುವ ಈ ರಸ್ತೆ ತುಪ್ಪ ಚೆಲ್ಲಿದರೂ ಬಳೆದುಕೊಳ್ಳಬಹುದು ಎನ್ನುವ ಗಾದೆಯಂತೆ ಕಣ್ಣಿಗೆ ಚೆನ್ನಾಗಿಯೇ ಇದೆ ಆದರೆ ಉದ್ಗಾನೆಗೊಂಡ ದಿನದಿಂದನೂ ಹಲವಾರು ವಿವಾದಗಳಿಗೆ ಕಾರಣವಾಗಿರುವ ಈ ರಸ್ತೆ ಮಳೆ ಬಂದಾಗಿನಿಂದ ತನ್ನ ಅಸಲಿ ಬಣ್ಣವನ್ನು ಬಯಲು ಮಾಡಿಕೊಂಡಿದೆ. ಸುಮಾರು 9500 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಈ ದಶಪಥ ಹೆದ್ದಾರಿ ಸಾರ್ವಜನಿಕರಿಗೆ ಅಪಾತದ ದಾರಿಯಾಗಿ ಪರಣಮಿಸಿದೆ.  ಈ ದಶಪಥ ರಸ್ತೆ ಅವೈಜ್ಞಾನಿಕವಾಗಿ ನಿಮಾರ್ಣವಾಗಿದ್ದೂ ದಾರಿಯುದ್ದಕ್ಕೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಭೀತಿ ಉಂಟಾಗಿದೆ.

ಮೋದಿ ಅವರಿಂದ ಉದ್ಘಾಟಿಸಲ್ಪಟ್ಟ ಬೆಂಗಳೂರು  -ಮೈಸೂರು ಎಕ್ಸ್‌ಪ್ರೆಸ್‌ ಹೈವೆ ರಾಮನಗರ ಸಮೀಪದ ಸಂಘಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡಿದರು. ಇದರಿಂದ ಮಳೆ ನೀರಿಗೆ ಸಿಲುಕಿ ಕೆಲ ವಾಹನಗಳು ಕೆಟ್ಟು ನಿಂತವು. ಈ ಯೋಜನೆಗೆ ಬರೋಬರಿ 9.500 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಸಮಸಮ್ಯೆಗಳ ಅಗರವೇ ಮಾತಾಡುವಂತಾಗಿದೆ. ಪರಿಪೂರ್ಣವಾಗಿ ಮುಗಿಯದ ಕಾಮಗಾರಿ ಇದಾಗಿದ್ದು ಅವೈಜ್ಞಾನಿಕತೆ ಹಾಗೂ ಗುಣಮಟ್ಟ ಇಲ್ಲದಿರುವುದು ಈಗ ಸಾಬೀತಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಮಿನಿ ಕಂಟ್ರಾಕ್ಟರ್‌ ಸಂಸದ ಪ್ರತಾಪ್‌ ಸಿಂಹ, ಎಕ್ಸ್‌ಪ್ರೆಸ್‌ ಹೈವೆ ಸಮಸ್ಯೆಗಳ ಬಗ್ಗೆ ಇಂಚಿಂಚು ಉತ್ತರ ಕೊಡುತ್ತೇನೆಂದು ಹೇಳಿದರಲ್ಲಾ, ಮಳೆ ಬಂದು ಹೈವೇ ಜಲಾವೃತ ಆಗಿದೆ. ಈ ನೀರನ್ನ ಮನೆಗೆ ತುಂಬಿಕೊಂಡು ಹೋಗಬಹುದಿತ್ತು ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ.

ಮಳೆನೀರು ಸರಾಗವಾಗಿ ಹರಿದುಹೋಗದೆ ಅವಾಂತರ ಸೃಷ್ಟಿಯಾಗಿದೆ. ಈ ವೇಳೆ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಕಿಡಿಕಾರಿದ್ದಾರೆ. ಕೆಟ್ಟು ನಿಂತ ಕಾರುಗಳಿಗೆ ಕೆಲವು ವಾಹನಗಳು ಡಿಕ್ಕಿ ಹೊಡೆದಿದ್ದು, ಅಲ್ಲಿದ್ದವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಾಮಾನ್ಯ ರಸ್ತೆಗಳಲ್ಲೇ ದಿನನಿತ್ಯವೂ ಅಪಘಾತಗಳು ಸರ್ವೇಸಾಮಾನ್ಯವಾಗಿರುವಾಗ ಎಕ್ಸ್‌ಪ್ರೆಸ್‌ ಹೈವೆ ದಶಪಥದಂತಹ ಹೆಸರನ್ನಿಟ್ಟುಕೊಂಡು ನಿರ್ಮಾಣವಾಗಿರುವ ಇಂತಹ ರಸ್ತೆಗಳನ್ನು ನಿರ್ಮಾಣ ಮಾಡುವ ಹೆದ್ದಾರಿಗ ಪ್ರಾಧಿಕಾರದವರು ಇಂತಹ ನಿರ್ಲಕ್ಷ್ಯ ತೋರಿ ವಾಹನ ಸವಾರ ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾರೆ.

- Advertisement -

Latest Posts

Don't Miss