ರಾಹುಲ್ ಗಾಂಧಿ ಕೆಲುವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ಹೇಳಿ ಸುದ್ದಿ ಆಗ್ತಾರೆ ಅದೇ ರೀತಿ ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದೆ. ಅದೇನಂದ್ರೆ
ಮಹಾ ಕುಂಭ ಮೇಳದ ಸಂದರ್ಭದಲ್ಲಿ ನಡೆದ ‘ಧಾರ್ಮಿಕ ಸಂಸತ್ತು’ ಧರ್ಮ ಸಂಸತ್ ಸಭೆಯ ಬಗ್ಗೆ ರಾಹುಲ್ ಟೀಕೆ ಮಾಡಿದ್ದೂ ಈಗ ಹಿಂದೂ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನುಸ್ಮೃತಿ ಕುರಿತ ಟೀಕೆ ಮಾಡಿದ್ದೂ ಅದರಿಂದ ಧರ್ಮ ಸಂಸತ್ ಸಭೆಯು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗೆ ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕುವ ನಿರ್ಣಯ ಕೈಗೊಂಡಿದೆ ಎನ್ನುವ ಸುದ್ದಿ ಹರಿದಾಡ್ತಿದೆ .
ಮೊದಲನೆಯದಾಗಿ ಧರ್ಮ ಸಂಸತ್ ಅಂದ್ರೆ ಏನು ಅಂತ ತಿಳಿಯೋದಾದ್ರೆ ಧರ್ಮ ಸಂಸತ್ ಒಂದು ಧಾರ್ಮಿಕ ಸಂಸತ್ ಆಗಿದೆ. ಹಿಂದೂ ಸಂತರು ಮತ್ತು ನಾಯಕರು ಸೇರಿ ಸನಾತನ ಧರ್ಮದ ನಂಬಿಕೆಗಳ ವಿಚಾರಕ್ಕೆ ಸಂಬಂಧಿಸಿ ಮಹತ್ವದ ವಿಷಯಗಳ ಕುರಿತು ಒಂದೆಡೆ ಸಮಾವೇಶ ಸೇರಿ ಚರ್ಚೆ ನಡೆಸುವುದಾಗಿದೆ . ಹಿಂದೂಗಳ ಧಾರ್ಮಿಕ ನಂಬಿಕೆ, ಸಾಮಾಜಿಕ ವಿಚಾರಗಳ ಕುರಿತು ಹಿಂದೂಗಳಿಗೆ ಈ ಒಂದು ಸಂಸತ್ ಮಾರ್ಗದರ್ಶನ ನೀಡುತ್ತದೆ ಅಂತ ಹೇಳಲಾಗುತ್ತೆ.
ರಾಹುಲ್ ಗಾಂಧಿ ಹಿಂದೂ ಧರ್ಮದ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿರುವ ಧರ್ಮ ಸಂಸತ್, ಈ ರೀತಿಯ ಹೇಳಿಕೆ ಟೀಕೆ ಸನಾತನ ಧರ್ಮಕ್ಕೆ ಅಗೌರವ ತೋರುವ ನಡೆಯಾಗಿದೆ . ಅವರ ಹೇಳಿಕೆ ಸನಾತನ ಧರ್ಮದ ನಂಬಿಕೆಗಳು ಹಾಗೂ ಹಿಂಬಾಲಕರಿಗೆ ಮಾಡಿದ ಅವಮಾನ ಅಂತ ಸಂಸತ್ ಖಂಡಿಸಿದೆ.
ಈ ಕುರಿತು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶನಾನಂದ ಸರಸ್ವತಿ ಅವರ ಶಿಬಿರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಸರ್ವಾನುಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆಯಂತೆ. ಮನುಸ್ಮೃತಿ ಕುರಿತು ರಾಹುಲ್ ಗಾಂಧಿ ತೀವ್ರ ಟೀಕೆ ಮಾಡಿದ್ದಾರೆ ಎನ್ನಲಾಗಿದೆ . ಇದರಿಂದ ಸನಾತನ ಧರ್ಮದ ಬೆಂಬಲಿಗರ ಮನಸಿಗೆ ನೋವಾಗಿದೆ ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಈ ಟೀಕೆ ಬಗ್ಗೆ ರಾಹುಲ್ ಗಾಂಧಿ ಒಂದು ತಿಂಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಈ ಬಹಿಷ್ಕಾರದ ನಿರ್ಣಯ ಜಾರಿಗೆ ಬರುತ್ತೆ ಎಂದು ಧರ್ಮ ಸಂಸತ್ ಹೇಳಿದೆ.