Sunday, September 8, 2024

Latest Posts

ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ

- Advertisement -

international news

ಹೌದು ವಿಕ್ಷಕರೆ ಕೊರೋನಾ ನಂತರ ಹಲವಾರು ಕಂಪನಿಗಳು ಆರ್ಥಿಕ ಸಂಕಷ್ಟನ್ನು ಎದುರಿಸುತಿದ್ದು ಹಲವಾರು ಕೆಲಸಗಾರರನ್ನು ಕೆಲಸದಿಂದ ತೆಗೆದು ಕಂಪನಿಯ ಆದಾಯದಲ್ಲಿ ಇಳಿಕೆಯಾಗದಂತೆ ಜಾಗೃತಿವಹಿಸುತ್ತಿವೆ. ಈಗಾಗಲೆ ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು  ಕೆಲಸಗಾರರನ್ನು ತೆಗೆದುಹಾಕಿ ಕಂಪನಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಿದ್ದು, ಅವುಗಳ ಹಾದಿಯಲ್ಲಿ ಈಗ ಎರಡನೆ ಬಾರಿ ಫೆಸ್ ಬುಕ್ ಮತ್ತು ಇನ್ಸ್ಟಾಗ್ರಾಂ ನ ಮಾತೃ ಸಂಸ್ಥೆಯಾಗಿರುವ ಮೆಟಾ ಸಹ ಕೆಲಸಗಾರರನ್ನು ವಜಾಗೊಳಿಸಲು ಮುಂದಾಗಿದೆ.

ಈ ಮೊದಲು ಅಂದರೆ ಕಳೆದ ನವೆಂಬರ್ ನಲ್ಲಿ ಸುಮಾರು 11000 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿರುವ ಸಂಸ್ಥೆ ಈಗ ಮತ್ತೊಮ್ಮೆ ವಜಾಗೊಳಿಸಲು ಮುಂದಾಗಿದೆ. ಈ ರೀತಿ ಕೆಲಸಗಾರರನ್ನು ವಜಾಗೊಳಿಸಲು ಕಾರಣ ಹುಡುಕಿದರೆ ಸಂಸ್ಥೆಗಳು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತಿದ್ದು ಬಹಳ ನಷ್ಟವನ್ನು ಅನುಭವಿಸುತ್ತಿವೆ. ಕಂಪನಿ ನಷ್ಟದಲ್ಲಿರುವ ಕಾರಣ ಕೆಲಸಗಾರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಹಾಗೂ ವಾರ್ಷಿಕ ಆರ್ಥಿಕ ಅದಾಯದ ಗುರಿಯನ್ನು ಮುಟ್ಟಲು ಮೆಟಾ ಕಂಪನಿ ಕೆಲಸಗಾರರನ್ನು ವಜಾಗೊಳಿಸುತ್ತಿದೆ.

ಆದರೆ ಈ ರೀತಿಯಾಗಿ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದರೆ ಅವರ ಬದುಕಿನ ಮೇಲೆ ತುಂಬಾ ಪರಿಣಾಮ ಬೀರಲಿದೆ.ಉದ್ಯೋಗಿಗಳನ್ನು   ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆ ಇದೇ ವಾರ ಆರಂಭಗೊಳಗಳಲಿದ್ದು ಮುಂದಿನ ವಾರದೊಳಗೆ ಕೆಲಗಾರರನ್ನುವಜಾಗೊಳಿಸಲಿದೆ.

ಈಗಾಗಲೆ ಫೆಸ್ಬುಕ್ ಸಂಸ್ಥೆಯ ಮಾಲಿಕರಾದ ಮಾರ್ಕ ಜೂಕರ್ ಬರ್ಗಗೆ ಮೂರನೆ ಮಗು ಜನಿಸಿದ್ದು ಅದರ ಆರೈಕೆಗೆಂದು ಕೆಲವು ದಿನಗಳ ಕಾಲ ಪೋಷಕ ರಜೆ ತೆಗೆದುಕೊಳ್ಳಲಿದ್ದಾರೆ. ರಜೆ ಮಂಜೂರಿಗಿಂತ ಮೊದಲೆ ವಜಾಗೊಳಿಸಲಿದೆ.

ಈ ರೀತಿಯ ನಿರ್ದಾರಕ್ಕೆ ಜೂಕರ್ ಬರ್ಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಉದ್ಯೋಗಿಗಳ ಕಾರ್ಯಕ್ಷಮತೆಯಲ್ಲಿ ಬದಲಾವಣೆಗಳಾಗಿದ್ದೂ ಸರಿಯಾಗಿ ಕೆಲಸದ ಕಡೆ ಗಮನ ಹರಿಸುತ್ತಿಲ್ಲ. ಇದು ಹೀಗೆಯೆ ಮುಂದುವರಿದರೆ ಕಂಪನಿ ಮುಂದಿನ ದಿನಗಳಲ್ಲಿಆರ್ಥಿಕವಾಗಿ ಬಹಳ ನಷ್ಟವನ್ನು ಅನುಭವಿಸಲಿದೆ. ಹಾಗಾಗಬಾರದು ಎಂಬ ಕಾರಣಕ್ಕಾಗಿ ಈ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾಗೂ ಕೆಲವು ಉದ್ಯೋಗಿಗಳು ಕೆಲಸವನ್ನು ಬಿಡಲು ನಿರ್ದರಿಸಿದ್ದಾರೆ. ಎಂದು ಹೇಳಲಾಗಿದೆ.

ಈ ಆಹಾರಗಳನ್ನ ಸೇರಿಸಿ ತಿನ್ನಬೇಡಿ..

 

ಮುಖದ ಮೇಲಿರುವ ಮೊಡವೆ ಕಲೆ ನಿವಾರಣೆಗೆ ಉಪಾಯ..

 

ಪ್ರಧಾನಿ ಮೋದಿ ಭಾಷಣ

- Advertisement -

Latest Posts

Don't Miss