ಬೆಂಗಳೂರಿನಲ್ಲಿ ನಕಲಿ PSI ಗ್ಯಾಂಗ್ ಪತ್ತೆ!

ಪೊಲೀಸ್ ಯೂನಿಫಾರಂ ಹಾಕ್ಕೊಂಡು ರಿಯಲ್‌ ಪೊಲೀಸ್‌ ಅಂತ ಬಿಲ್ಡಪ್‌ ಕೊಟ್ಟು, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ PSI ಸೇರಿ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಲಾಗಿದೆ. PSI ಎಂಬ ಸೋಗಿನಲ್ಲಿ ಮನೆಗೆ ನುಗ್ಗಿ ಯುವಕನೊಬ್ಬನನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾರೆ. ಬಂಧಿತರಿಂದ ರೂ.45 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬೈಕ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮತ್ತಿಕೆರೆ ನಿವಾಸಿ ಮಲ್ಲಿಕಾರ್ಜುನ್‌, ಹಾಗೂ ಆತನ ಸ್ನೇಹಿತರಾದ ಪ್ರಮೋದ್‌, ವಿನಯ್‌ ಮತ್ತು ಹೃತ್ವಿಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ವಿದ್ಯಾರಣ್ಯಪುರದ ಬಳಿಯ ನರಸೀಪುರ ಲೇಔಟ್‌ನಲ್ಲಿ ವಾಸವಾಗಿರುವ ನವೀನ್‌ ಎಂಬ ಯುವಕನಿಂದ ಹಣ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. PSI ಆಗಬೇಕು ಅಂತ ಮಲ್ಲಿಕಾರ್ಜುನ ಎರಡು ಬಾರಿ ಎಕ್ಸಾಮ್ ಬರೆದಿದ್ದ. ಎರಡು ಬಾರಿಯೂ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಇಷ್ಟಾದ್ರೂ ಪರೀಕ್ಷೆ ಪಾಸ್ ಆಗಿ PSI ಆಗಿದ್ದೇನೆ ಎಂದು ಊರಲ್ಲಿ ಬಿಂಬಿಸಿದ್ದ. ಪೊಲೀಸ್ ಯೂನಿಫಾರಂ, ಲಾಠಿ, ಟೋಪಿ, ಶೂ ಧರಿಸಿ ಫೋಟೋ ಶೂಟ್ ಮಾಡಿಸಿದ್ದ. ಸ್ವಂತ ಊರು ಸಿರಗುಪ್ಪದಲ್ಲಿ ತಾನೂ ಬೆಂಗಳೂರಲ್ಲಿ PSI ಆಗಿದ್ದೀನಿ ಅಂತ ಬಿಲ್ಡಪ್ ಕೊಟ್ಟಿದ್ದ.

ಐಷಾರಾಮಿ ಜೀವನ ನಡೆಸಬೇಕು ಅಂತ ಮಲ್ಲಿಕಾರ್ಜುನ ಅಡ್ಡದಾರಿ ಹಿಡಿದಿದ್ದ. ಇದಕ್ಕೆ ಮಲ್ಲಿಕಾರ್ಜುನನಿಗೆ ಎ4 ಆರೋಪಿ ಹೃತ್ವಿಕ್ ಸಾಥ್‌ ಕೊಟ್ಟಿದ್ದ. ಹೃತ್ವಿಕ್‌ ಬೇರಾರು ಅಲ್ಲ ನವೀನ್ ಸ್ನೇಹಿತನಾಗಿದ್ದ. ತುಂಬಾ ಹತ್ತಿರದಿಂದ ಎಲ್ಲವನ್ನ ಗಮನಿಸುತ್ತಿದ್ದ. ನವೀನ್ ಮನೆಗೆ ನುಗ್ಗಿದ್ರೆ ಹಣ, ಚಿನ್ನಾಭರಣ ಸಿಗುತ್ತೆ ಎಂದು ಮಲ್ಲಿಕಾರ್ಜುನನಿಗೆ ತಿಳಿಸಿದ್ದಾರೆ. ಅದರಂತೆ ಪೊಲೀಸ್ ಡ್ರೆಸ್ ಧರಿಸಿ ನವೀನ್ ಮನೆಗೆ ಇದೇ ತಿಂಗಳು 7 ರಂದು ಕಾರಿನಲ್ಲಿ ಆರೋಪಿಗಳು ಎಂಟ್ರಿ ಕೊಟ್ಟಿದ್ದರು.

ನೀನು ಗಾಂಜಾ ಮಾರುತ್ತಿದ್ದೀಯಾ, ಮನೆ ಸರ್ಚ್ ಮಾಡಬೇಕು ಅಂತಾ ಬೆದರಿಕೆ ಹಾಕಿದ್ದಾರೆ. ನವೀನ್ ಮೇಲೆ ಲಾಠಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಅರೆಸ್ಟ್ ಮಾಡಬಾರದು ಅಂದರೆ ಹಣ ಕೊಡಬೇಕು ಎಂದು ಖಾತೆಯಲ್ಲಿದ್ದ 87 ಸಾವಿರ, ಬೀರುವನಲ್ಲಿದ್ದ 53 ಸಾವಿರ, ಪರ್ಸ್‌ನಲ್ಲಿದ್ದ 2 ಸಾವಿರ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನವೀನ್ ಪ್ರಕರಣ ದಾಖಲಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author