Thailand News: ಥೈಲ್ಯಾಂಡ್‌ನಲ್ಲಿ ಪಾಪ್ ಗಾಯಕಿಯೊಬ್ಬಳು, ಮಸಾಜ್ ಸೆಂಟರ್‌ಗೆ ಹೋಗಿ ಮಸಾಜ್ ಮಾಡಿಸಿಕೊಳ್ಳುವ ಭರದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಸಾಜ್ ಪಾರ್ಲರ್‌ನವರ ಎಡವಟ್ಟಿನಿಂದ ಖ್ಯಾತ ಗಾಾಯಕಿಯ ಜೀವ ಹೋಗಿದೆ.
ಛಾಯದಾ ಪ್ರಾ-ಹೋಮ್ (20) ಎಂಬ ಗಾಯಕಿ, ಉಡಾನ್ ಥಾನಿಯಾ ಎಂಬ ಪಾರ್ಲರ್‌ನಲ್ಲಿ ಕುತ್ತಿಗೆಗೆ ಸಂಬಂಧಿಸಿದದ ಮಸಾಜ್ ಮಾಡಿಕೊಳ್ಳಲು ತೆರಳಿದ್ದರು. ಇದರಲ್ಲಿ 2ರಿಂದ ಮೂರು ಸೆಶನ್ ಇರುತ್ತದೆ. ಇಂಥ ಮಸಾಜ್‌ನ್ನು ಎಕ್ಸ್‌ಪರ್ಟ್‌ಗಳು ಮಾಡುತ್ತಾರೆ. ಆದರೆ, ಅಲ್ಲಿರುವ ಮಸಾಜ್ ಮಾಡುವವರು ಅದೇನು ಮಾಡಿದ್ದರೋ ದೇವರಿಗೆ ಗೊತ್ತು. ಆಕೆ ಮೊದಲ ಬಾರಿ ಹೋಗಿ ಕುತ್ತಿಗೆ ಮಸಾಜ್ ಮಾಡಿಕೊಡ ಬಳಿಕ, ಆಕೆಯ ದೇಹದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳಲು ಆರಂಭಿಸಿತು.
ಎರಡನೇಯ ಬಾರಿ ಮತ್ತೆ ಮಸಾಜ್ ಮಾಡಿಸಿಕೊಂಡು ಬಂದ ಬಳಿಕ, ಹಾಸಿಗೆ ಹಿಡಿಯುವಷ್ಟು ಆಕೆ ಬಲಹೀನಳಾಗಿ ಹೋದಳು. ಆದರೂ ಮೂರನೇ ಬಾರಿ ಹೋಗಿ ಮತ್ತೆ ಮಸಾಜ್ ತೆಗೆದುಕೊಂಡಳು. ಇದಾದ ಬಳಿಕ ಐಸಿಯುನಲ್ಲಿ ಚಿಕಿತ್ಸೆ ತೆಗೆದುಕೊಳ್ಳುವ ಮಟ್ಟಿಗೆ ಆಕೆಯ ಸ್ಥೀತಿ ಗಂಭೀರವಾಗುತ್ತಾ ಹೋಯಿತು. ಛಾಯದಾ ಮತ್ತು ಆಕೆಯ ಕುಟುಂಬಸ್ಥರು ಮಸಾಜ್ ಪಾರ್ಲರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕೇಸ್ ಹಾಕಬೇಕು ಎಂದುಕೊಂಡರು. ಆದರೆ ಯಾವುದೇ ಸಾಕ್ಷಿ ಇಲ್ಲದ ಕಾರಣ, ಅವರು ಕೇಸ್ ಹಾಕಲು ಸಾಧ್ಯವಾಗಲಿಲ್ಲ.
ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಛಾಯದಾ ಸಾವನ್ನಪ್ಪಿದ್ದಾಳೆ. ಆರೋಗ್ಯವನ್ನು ಅಭಿವೃದ್ಧಿ ಮಾಡಬೇಕಾದ ಮಸಾಜ್ ಆಕೆಯ ಜೀವವನ್ನೇ ಕಸಿದುಕೊಂಡಿದೆ. ಆಕೆ ಯಾವುದೇ ಟ್ರೀಟ್‌ಮೆಂಟ್ ತೆಗೆದುಕೊಳ್ಳದೇ, ಸುಮ್ಮನೆ ಇದ್ದಿದ್ದರೆ ಬದುಕಿ ಉಳಿಯುತ್ತಿದ್ದಳೇನೋ..