Thursday, November 13, 2025

Latest Posts

3 ವರ್ಷ ‘ಚಾಚಾ’ ಹೋರಾಟದ ಬಗ್ಗೆ ಕಿದ್ವಾಯಿ ವೈದ್ಯರು ಹೇಳಿದ್ದೇನು?

- Advertisement -

ಖ್ಯಾತ ಖಳನಟ ಹರೀಶ್ ರಾಯ್, ಕಳೆದ 3 ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ರು. ಹಲವು ರೀತಿಯ ಚಿಕಿತ್ಸೆಯನ್ನು ನೀಡಲಾಗಿತ್ತು. ಅವರ ಚಿಕಿತ್ಸೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಣದ ಸಹಾಯ ಮಾಡಿದ್ದರು. ಇನ್ನೇನು ಹರೀಶ್ ರಾಯ್ ಅವರು ಗುಣಮುಖರಾಗಿ, ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ನಿನ್ನೆ ಹರೀಶ್ ರಾಯ್ ನಿಧನರಾಗಿದ್ದಾರೆ. ಚಿಕಿತ್ಸೆ ನೀಡಿದರೂ ಕೂಡ ಏಕೆ ಬದುಕಲಿಲ್ಲ ಎಂಬುದನ್ನು, ಕಿದ್ವಾಯಿ ಆಸ್ಪತ್ರೆಯ ವೈದ್ಯರೊಬ್ಬರು ವಿವರಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಹರೀಶ್ ರಾಯ್ ನಮ್ಮ ಬಳಿ ಬಂದಾಗ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಆಗಿತ್ತು. ಆಗಲೇ ಅದು ಶ್ವಾಸಕೋಶಕ್ಕೆ ಹರಡಿತ್ತು. ಅವರಿಗೆ ಕ್ಯಾನ್ಸರ್ ಕೊನೇ ಹಂತದಲ್ಲಿ ಇತ್ತು. ಫೈನಲ್ ಹಂತದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿದರೆ ಪೂರ್ತಿ ಗುಣ ಮಾಡುವುದು ಕಷ್ಟ ಆಗುತ್ತದೆ. ಮೂರು ವರ್ಷದ ಹಿಂದೆ ಅವರಿಗೆ ಟಾರ್ಗೆಟೆಡ್ ಥೆರಪಿ ಶುರು ಮಾಡಲಾಗಿತ್ತಂತೆ.

ಆರಂಭದಲ್ಲಿ ಚಿಕಿತ್ಸೆಗೆ ಹರೀಶ್ ರಾಯ್ ಸ್ಪಂದಿಸಿದರು. ಒಂದೂವರೆ ವರ್ಷದ ತನಕ ಕಾಯಿಲೆ ನಿಯಂತ್ರಣದಲ್ಲಿ ಇತ್ತು. 2ನೇ ಟಾರ್ಗೆಡೆಟ್ ಥೆರಪಿ ನೀಡಿದೆವು. ಅದರಿಂದ ಸುಮಾರು ಒಂದು ವರ್ಷದ ತನಕ ಅವರು ಸ್ಪಂದಿಸಿದರು. ಆ ಬಳಿಕ ಇಮ್ಯೂನೋ ಥೆರಪಿ ಎಂಬ ಇಂಜೆಕ್ಷನ್ ಪ್ರಯತ್ನಿಸಿದೆವು. ದುರಾದೃಷ್ಟವಶಾತ್ ಇಮ್ಯುನೋ ಥೆರಪಿಗೆ ಅಷ್ಟು ಚೆನ್ನಾಗಿ ಸ್ಪಂದಿಸಲಿಲ್ಲ.

ಥೈರಾಯ್ಡ್‌ಗೆ ಇದ್ದ ಎಲ್ಲಾ ಆಯ್ಕೆಗಳನ್ನು ನಾವು ಮಾಡಿದ್ದೇವೆ. ಕಳೆದ ಒಂದು ತಿಂಗಳಿಂದ ಅವರ ಆರೋಗ್ಯ ಹದಗೆಟ್ಟಿತು. ಓಪಿಡಿ ರೋಗಿಗಳಿಗೆ ಅವರು ಸ್ಫೂರ್ತಿ ತುಂಬುತ್ತಿದ್ದರು. 3 ವರ್ಷದ ಹಿಂದೆ ಅವರು ಬಂದಾಗ ಇಷ್ಟು ದಿನ ಬದುಕುತ್ತಾರೆ ಎಂಬ ಭರವಸೆ ಇರಲಿಲ್ಲ. ಆದರೆ ಅವರ ಪಾಸಿಟಿವ್ ಮನೋಭಾವದಿಂದ ಚಿಕಿತ್ಸೆಗೆ ಸ್ಪಂದಿಸಿದ್ದರಿಂದ, ಇಲ್ಲಿಯ ತನಕ ಬದುಕಿದ್ರು. ಚಿಕಿತ್ಸೆ ನಡೆಯುತ್ತಿದ್ದಾಗಲೂ, ಕೆಲವು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರೆಂದು ಡಾಕ್ಟರ್ ಸುರೇಶ್ ಬಾಬು ಹೇಳಿದ್ದಾರೆ.

ತಾವು ಇನ್ನು ಇರುವುದಿಲ್ಲ ಎಂಬ ಭಾವನೆ ಅವರಿಗೆ ಯಾವತ್ತೂ ಬಂದಿರಲಿಲ್ಲ. ಇನ್ನೂ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಹಂಬಲ ಅವರಿಗಿತ್ತು. ಚಿತ್ರರಂಗದ ಅನೇಕ ಹಿತೈಷಿಗಳು ಬಂದು, ಅವರನ್ನು ಮಾತನಾಡಿಸಿದ್ದರು. ಇನ್ನೂ ಹೆಸರು ಮಾಡಬೇಕು ಎಂಬ ಆಸೆ ಹರೀಶ್ ರಾಯ್ ಅವರಿಗೆ ಇತ್ತು. ಕೆಜಿಎಫ್ ಸಿನಿಮಾದ ಮುಂದಿನ ಭಾಗ ಬಂದರೆ ಅದರಲ್ಲಿ ನಟಿಸಬೇಕು ಎಂಬ ಆಸೆ ಇತ್ತಂತೆ.

- Advertisement -

Latest Posts

Don't Miss