Wednesday, September 3, 2025

Latest Posts

ದಸರಾಗೆ ಈ ಕ್ರೀಡೆ ಇರಲ್ಲ ಅಭಿಮಾನಿಗಳಿಗೆ ನಿರಾಸೆ

- Advertisement -

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ದಿನಕಗಣನೆ ಪ್ರಾರಂಭವಾಗಿದೆ. ವಿಶೇಷವಾಗಿ ದಸರಾದಲ್ಲಿ 9 ದಿನಗಳ ಕಾಲ ಅನೇಕ ದೇಶಿ ಕ್ರೀಡೆಗಳಿಗೆ ಒತ್ತು ನೀಡುತ್ತಾರೆ. ಅದೇ ರೀತಿ ಈ ಬಾರಿ ಕರಾವಳಿ ಭಾಗದ ಜನಪ್ರಿಯ ಕಂಬಳ ಕ್ರೀಡೆಯನ್ನು ಮೈಸೂರಿನಲ್ಲಿ ಕಣ್ತುಂಬಿಕೊಳ್ಳುತ್ತೇವೆ ಎಂದುಕೊಂಡಿದ್ದ ಜನರಿಗೆ ನಿರಾಸೆ ಎದುರಾಗಿದೆ.

ಕರಾವಳಿ ಭಾಗದ ಕಂಬಳ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸದೇ ಇರುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿಂದೇ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೈಸೂರಿಗ ಅಗಮಿಸಿದ್ದಾಗ ದಸರಾ ಸಮಯದಲ್ಲಿ ಕಂಬಳ ಕ್ರೀಡೆಯನ್ನು ಆಯೋಜನೆ ಮಾಡುತ್ತೇವೆ ಎಂದು ಹೇಳಿದ್ರು. ಈ ಕಾರಣದಿಂದ ಮೈಸೂರು ಭಾಗದಲ್ಲಿರುವ ಕರಾವಳಿ ಭಾಗದ ಜನರಿಗೆ ಸಂತಸ ಶುರುವಾಗಿತ್ತು. ನಾವು ಇರುವ ಜಾಗದಲ್ಲಿಯೇ ಕಂಬಳ ವೀಕ್ಷಣೆ ಮಾಡುಬಹುದು ಎಂದು. ಆದರೆ ಈಗ ಅಭಿಮಾನಿಗಳಿಗೆ ನಿರಾಶೆ ಉಂಟಾಗಿದೆ.

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಸರಾ ಮಹೋತ್ಸವಕ್ಕೆ ಅದರದೇ ಆದ ಚೌಕಟ್ಟು ಸ್ವರೂಪಗಳು ಇದೆ. ದಸರಾಗೆ ಕಂಬಳವನ್ನು ಸೇರಿಸುವುದು ಸರಿಯಲ್ಲ. ದಸರಾಗೆ ಹೊಸ ಆಚರಣೆಗಳನ್ನು ಸೇರಿಸುವುದು ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯ ದಸರಾದಲ್ಲಿ ಕಂಬಳ ಆಯೋಜಿಸುವ ಬಗ್ಗೆ ಮೈಸೂರು ಜಿಲ್ಲಾಡಳಿತಕ್ಕೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss