ಸ್ಯಾಂಡಲ್ ವುಡ್ನ ಬ್ಯುಸಿ ನಟರಲ್ಲಿ ಶಿವಣ್ಣ ಕೂಡ ಒಬ್ಬರು. ಇತ್ತೀಚಿಗಷ್ಟೆ ಶಿವಣ್ಣ, ವೆಬ್ ಸೀರೀಸ್ ನಲ್ಲಿ ನಟಿಸುವುದಾಗಿ ತಿಳಿಸಿದ್ದರು. ಇದೀಗ ‘ಭಜರಂಗಿ-2’ ಚಿತ್ರದ ನಂತರ ಅವರ ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಈ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಇದಕ್ಕೆ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತದ್ದು ಆ ಹಾಡಿನಲ್ಲಿ ಏನಿದೆ? ಯಾಕಿಷ್ಟು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ‘ಬೈರಾಗಿ’ ಶೂಟಿಂಗ್ ಮುಗಿದಿದ್ದು, ರಿಲೀಸ್‌ಗೆ ರೆಡಿಯಾಗಿದೆ. ಶಿವಣ್ಣ ಈ ಸಿನಿಮಾದಲ್ಲಿ ಬೈರಾಗಿಯ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಹಿಂದೆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಹಾಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳು ಹೆಚ್ಚಿನ ಕುತೂಹಲ ಇಟ್ಟುಕೊಂಡಿದ್ದರು. ಆದರೆ ಇದೀಗ ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು, ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶಿವಣ್ಣ ಅವರ ಬೈರಾಗಿ ಹಾಡನ್ನು ನಟ ದುನಿಯಾ ವಿಜಯ್ ರಿಲೀಸ್ ಮಾಡಿ ಶಿವರಾಜ್‌ಕುಮಾರ್ ಎಂದೆಂದಿಗೂ ಕಿಂಗ್ ಎಂದು ಹೇಳಿದ್ದರು. ಆದರೆ ಈ ಹಾಡಿನ ಬಗ್ಗೆ ಜನ ಹೇಳಿದ್ದು ಹೀಗೆ. ಹಾಡು ಹೇಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಶಿವಣ್ಣನ ಲುಕ್ ಬಗ್ಗೆ ಹೆಚ್ಚಾಗಿ ಚರ್ಚೆ ಆಗುತ್ತಿದೆ. ಈ ಹಾಡಿನಲ್ಲಿ ನಟ ಶಿವರಾಜ್‌ಕುಮಾರ್ ಲುಕ್ ಚೆನ್ನಾಗಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
‘ಬೈರಾಗಿ’ ಚಿತ್ರದ ‘ನಕರನಕ’ ಲಿರಿಕಲ್ ಹಾಡಿನಲ್ಲಿ ನಟ ಶಿವರಾಜ್‌ಕುಮಾರ್ ಹೇರ್ ಸ್ಟೈಲ್ ಸ್ವಲ್ಪ ವಿಭಿನ್ನವಾಗಿದೆ. ಹಾಡಿನಲ್ಲಿ ಉದ್ದ ಕೂದಲಿನ ವಿಗ್ ಅನ್ನು ಹಾಕಲಾಗಿದೆ. ಈ ಹಿಂದೆಯೂ ಕೂಡ ಶಿವಣ್ಣ ಸಾಕಷ್ಟು ಚಿತ್ರಗಳಲ್ಲಿ ವಿಗ್ ಹಾಕಿದ್ದಾರೆ. ಆದರೆ ಈ ಹಾಡಿನಲ್ಲಿ ಇರುವ ಹೇರ್ ಸ್ಟೈಲ್ ಅವರಿಗೆ ಅಷ್ಟಾಗಿ ಸೂಟ್ ಆಗಿಲ್ಲ ಎಂದು ಅಭಿಮಾನಿಗಳು ಶಿವಣ್ಣ ಅವರ ಹೇರ್ ಸ್ಟೈಲ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಹಾಡಿನ ಬಗ್ಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ‘ನಕರನಕ’ ಎಂದು ಶುರುವಾಗುವ ಹಾಡಿನಲ್ಲಿ ನಾಯಕನ ಪಾತ್ರವನ್ನು ವರ್ಣನೆ ಮಾಡುತ್ತದೆ. ಈ ಹಾಡಿಗೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮ್ಯೂಸಿಕ್ ಮಾಡಿದ್ದು, ಹಾಡಿನ ಸಾಹಿತ್ಯ ಮತ್ತು ಸಂಗೀತ ಎರಡೂ ಕೂಡ ವಿಭಿನ್ನವಾಗಿದೆ. ಈ ಸಾಂಗ್ ನಲ್ಲಿ ವಿಭಿನ್ನ ಎರಿಳಿತಗಳು ಇರುವುದರಿಂದ ಡಿಫ್ರೆಂಟ್ ಫೀಲ್ ಕೊಡುತ್ತದೆ. ಹಾಗೂ ಇದರ ಸಂಗೀತ ವಿಭಿನ್ನವಾಗಿದ್ದು, ಅನೂಪ್ ಪ್ರಯೋಗಕ್ಕೆ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ.
ಇನ್ನು ಈ ಚಿತ್ರದ ಟ್ರೈಲರ್‌ಗಾಗಿ ಪ್ರೇಕ್ಷಕರು ಕಾಯುತ್ತಿದ್ದು, ಚಿತ್ರದ ಬಹುತೇಕ ಎಲ್ಲಾ ಕೆಲಸಗಳನ್ನು ಚಿತ್ರ ತಂಡ ಮುಗಿಸಿ ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಇನ್ನು ಸದ್ಯದಲ್ಲೇ ಸಿನಿಮಾದ ರಿಲೀಸ್ ದಿನಾಂಕವನ್ನು ಕೂಡ ನಿಗಧಿಪಡಿಸಲಾಗುತ್ತದೆ.
ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆ ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದು, ಯಶ್ ಶಿವಕುಮಾರ್, ಅಂಜಲಿ, ಪೃಥ್ವಿ ಅಂಬರ್ಮುಂತಾದ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹಾಗೂ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ