Saturday, August 9, 2025

Latest Posts

ಸರ್ಕಾರಿ ಗೌರವಗಳೊಂದಿಗೆ ಐಗಳಿ ಯೋಧನಿಗೆ ವಿದಾಯ!

- Advertisement -

ಪಂಜಾಬ್ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಹೃದಯಾಘಾತದಿಂದ ಬೆಳಗಾವಿ ಜಿಲ್ಲೆಯ ಐಗಳಿ ಗ್ರಾಮದ ಯೋಧ ಮೃತಪಟ್ಟಿದ್ರು. ಅಗ್ನಿವೀರ ಯೋಧ ಕಿರಣರಾಜ ಕೇದಾರಿ ತೆಲಸಂಗ ಅಂತ್ಯಕ್ರಿಯೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ನೆರವೇರಿದೆ.

ಆಗಸ್ಟ್‌ 5ರಂದು ಪಂಜಾಬ್ ಮಿಲಟರಿ ಯೂನಿಟ್‌ದಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಆ ವೇಳೆ ಯೋಧ ಕಿರಣರಾಜ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತರ ಪಾರ್ಥಿವ ಶರೀರವು ಪಂಜಾಬದಿಂದ ದೆಹಲಿ ವಿಮಾನದ ಮೂಲಕ, ಬೆಳಗಾವಿಗೆ ತರಲಾಯಿತು. ಬೆಳಗಾವಿಯಿಂದ ರಸ್ತೆ ಮೂಲಕ ಸೇನಾ ಆ್ಯಂಬುಲೆನ್ಸ್‌ ವಾಹನದ ಮೂಲಕ ಅಥಣಿ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು.

ಅಥಣಿ ಪಟ್ಟಣದ ಎಲ್ಲಮ್ಮ ದೇವಿ ದೇವಸ್ಥಾನದಿಂದ, ಐಗಳಿ ಗ್ರಾಮದವರೆಗೆ ಅಗ್ನಿವೀರನ ಮೆರವಣಿಗೆ ಮಾಡಲಾಯ್ತು. ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೇನಾಧಿಕಾರಿಗಳಿಂದ ಪುಷ್ಪ ನಮನ ಸಲ್ಲಿಸಿ, ಶಸ್ತ್ರಾಸ್ತ್ರಗಳಿಂದ 5 ಸುತ್ತು ಮದ್ದು ಗುಂಡು ಹಾರಿಸಿ, ಗೌರವ ನಮನ ಸಲ್ಲಿಸಿದರು. ನಂತರ ರಾಷ್ಟ್ರಧ್ವಜವನ್ನು ಕುಟುಂಬಸ್ಥರಿಗೆ ಸೇನಾಧಿಕಾರಿಗಳು ಹಸ್ತಾಂತರಿಸಿದರು. ನಂತರ ಸಾರ್ವಜನಿಕರಿಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

- Advertisement -

Latest Posts

Don't Miss