ಹುಬ್ಬಳ್ಳಿ: ಮೆಂತೆ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಕ್ಕೆ ಯುವ ರೈತ ಸೊಪ್ಪನ್ನು ಫ್ರೀಯಾಗಿ ಹಂಚಿದ್ದಾರೆ. ಹುಬ್ಬಳ್ಳಿಯ APMC ಮಾರುಕಟ್ಟೆಯಲ್ಲಿ ಮೆಂತೆ ಸೊಪ್ಪು ಫ್ರೀಯಾಗಿ ಹಂಚಿದ್ದಾರೆ.
ಘಟಪ್ರಭಾದಿಂದ ಟ್ರ್ಯಾಕ್ಟರ್ನಲ್ಲಿ ಮೆಂತೆ ಸೊಪ್ಪು ತಂದಿದ್ದ ರೈತ ಮಾರುಕಟ್ಟೆಯಲ್ಲಿ 1 ರೂಪಾಯಿಗೆ ಮೆಂತೆ ಸೊಪ್ಪು ಮಾರಾಟ ಮಾಡಲು ಮುಂದಾಗಿದ್ದಾರೆ.ಆದ್ರೆ ಒಂದು ರೂಪಾಯಿಗೂ ಮೆಂತೆ ಸೊಪ್ಪು ಮಾರಾಟವಾಗದ ಕಾರಣ ಉಚಿತವಾಗಿ ಮೆಂತೆ ಸೊಪ್ಪು ಹಂಚಿದ್ದಾರೆ.
ಟ್ರ್ಯಾಕ್ಟರ್ ಮೇಲೆ ನಿಂತು ಎಲ್ಲ ಫ್ರೀ, ಎಲ್ಲ ಫ್ರೀ ಎಂದು ಮೆಂತೆ ಸೊಪ್ಪು ತೂರಿದ್ದಾರೆ. ನೂರಾರು ಬಾಕ್ಸ್ಗಳಲ್ಲಿ ಮೆಂತೆ ಸೊಪ್ಪು ತಂದಿದ್ದ ರೈತ, ಕಳೆದ ಕೆಲ ದಿನಗಳ ಹಿಂದೆ ಹತ್ತು ರೂಪಾಯಿಗೆ ಒಂದರಂತೆ ಮಾರಾಟ ಮಾಡಿದ್ದ. ಆದರೆ ಇವತ್ತು ಒಂದು ರೂಪಾಯಿಗೂ ಮಾರಾಟವಾಗದ ಕಾರಣ ಎಲ್ಲ ಫ್ರೀ, ಎಲ್ಲ ಫ್ರೀ ಎಂದು ಸೊಪ್ಪು ತೂರಿದ್ದಾನೆ. ಉಚಿತವಾಗಿ ಸಿಕ್ಕ ಮೆಂತೆ ಸೊಪ್ಪಿಗೆ ಜನ ಮುಗಿಬಿದ್ದಿದ್ದಾರೆ.
Operation Hasta: ಜಗದೀಶ್ ಶೆಟ್ಟರ್ ಗೆ ಅಮಿತ್ ಷಾ ಕರೆ ಮಾಡಿದ್ದು ನಿಜಾನಾ ?
Tweet viral: ಬಿಜೆಪಿಗರ ನಡೆಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ವ್ಯಂಗ್ಯ..!
Vinay kulkarni : ಜಿದ್ದಾಜಿದ್ದಿನ ರಾಜಕೀಯ ಕುರುಕ್ಷೇತ್ರಕ್ಕೆ ಸಿದ್ದವಾಗಿದೆ ಧಾರವಾಡ ಜಿಲ್ಲೆ