ಬೆಳೆದ ಬೆಳೆ ಕಾಪಾಡಿಕೊಳ್ಳಲು ರೈತರು ನಾನಾ ಪ್ರಯತ್ನ ಮಾಡೋದನ್ನ ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಯಾದಗಿರಿಯ ಮುದನೂರ ಗ್ರಾಮದ ರೈತನೊಬ್ಬ ತಾನು ಬೆಳೆದ ಹತ್ತಿ ಬೆಳೆಗೆ ಯಾರ ದೃಷ್ಟಿಯಾಗದಿರಲಿ ಎಂದು ಹೊಲದ ಬಳಿ ಮಾದಕ ತಾರೆ ಸನ್ನಿ ಲಿಯೋನ್ ಫೋಟೋ ಇಟ್ಟಿದ್ದಾನೆ.
ಬೆಳೆದ ಬೆಳೆ ಕಾಪಾಡಿಕೊಳ್ಳಲು ರೈತರು ಯಾವೆಲ್ಲಾ ಪ್ರಯತ್ನ ಮಾಡ್ತಾರೆ ನೋಡಿ. ಅದೂ ಸಾಮಾನ್ಯ ಪ್ರಯತ್ನಗಳಲ್ಲ. ಕೆಲವೊಮ್ಮೆ ಕೇಳಿದ್ರೆ ನಗು ಬರುತ್ತೆ ಆದರೆ ಅದೆಲ್ಲವೂ ಮಾಡೋದು ತಾವು ಶ್ರಮಪಟ್ಟು ಬೆಳೆದ ಬೆಳೆ ರಕ್ಷಣೆ ಅನ್ನೋ ಒಂದೇ ಕಾರಣಕ್ಕಾಗಿ. ವಿಚಿತ್ರ ಘಟನೆ ಯಾದಗಿರಿಯ ಮುದನೂರ ಗ್ರಾಮದಲ್ಲಿ ನಡೆದಿದ್ದು ಎಲ್ಲರ ಗಮನ ಸೆಳೆದಿದೆ.
ಸಾರ್ವಜನಿಕರ ಗಮನವನ್ನು ಹೊಲದತ್ತ ಸೆಳೆಯದಿರಲು ಈ ಕ್ರಮ ತೆಗೆದುಕೊಂಡಿದ್ದು, ಜನರ ನೋಟ ಮೊದಲು ಪೋಸ್ಟರ್ ಕಡೆಗೆ ಹೋಗುತ್ತದೆ, ಇದರಿಂದ ಬೆಳೆ ‘ದೃಷ್ಟಿ ತಪ್ಪುತ್ತದೆ’ ಎಂದು ರೈತ ನಂಬಿದ್ದಾನೆ.
ಹತ್ತಿ ಈ ವರ್ಷ ಚೆನ್ನಾಗಿ ಬಂದಿದೆ. ಜನರ ದೃಷ್ಟಿ ಬೀಳಬಾರದೆಂದು ಸನ್ನಿ ಲಿಯೋನ್ ಫೋಟೋ ಹಾಕಿದ್ದೇನೆ. ಜನರು ಹೊಲ ನೋಡುವ ಬದಲು ಫೋಟೋ ನೋಡ್ತಾರೆ. ಆದ್ದರಿಂದ ಬೆಳೆ ರಕ್ಷಿತವಾಗಿರುತ್ತದೆ ಎಂದು ಹೇಳಿದ್ದಾರೆ. ಈ ವಿಭಿನ್ನ ಪ್ರಯೋಗ ಈಗ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವೈರಲ್ ಆಗುತ್ತಿದೆ.
ವರದಿ : ಲಾವಣ್ಯ ಅನಿಗೋಳ

