Wednesday, April 16, 2025

Latest Posts

ರೈತನ ಬೆನ್ನೆಲುಬನ್ನೇ ಮುರಿಯುತ್ತಿರುವ ಅಧಿಕಾರಿಗಳು

- Advertisement -

special story

ರೈತ ದೇಶದ ಬೆನ್ನೆಲುಬು ಅಂತಾರೆ . ಈ ಹೆಸರು ಕೇಳುವುದಕ್ಕೆ ಎಷ್ಟು ಖುಷಿಯಾಗುತ್ತೆ ಅಲ್ವಾ.ನಿಜ ದೇಶಕ್ಕೆ ರೈತ ಅನ್ನವನ್ನು ಹಾಕುತ್ತಾನೆ. ರೈತ ಬೆಳೆಯದಿದ್ದರೆ ನಾವು ಒಂದು ದಿನ ಜೇವಿಸಲು ಸಾದ್ಯವಿಲ್ಲ .ಇದು ಎಲ್ಲಾರಿಗೂ ಗೊತ್ತಿರುವ ವಿಷಯ .ಆದರೆ ಎಲ್ಲ ಮಾತುಗಳು ಕೇವಲ ಕಥೆ ಪುಸ್ತಕ ಕಾದಂಬರಿಗಳಲ್ಲಿ ಮಾತ್ರ ಸೀಮಿತವಾಗಿವೆ.ಇವರಿಗೆ ರಾರು ಸಹ ಕಿಂಚಿತ್ತು ಸಹಾಯ ಮಾಡುವುದಿಲ್ಲ.

ಹಾವೇರಿ ಜಿಲ್ಲೆಯ ಸವಣೂರು ಗ್ರಾಮದಲ್ಲಿ ಒಂದು ಹೃದಯ ಹಿಂಡುವ ಘಟನೆ ನಡೆದಿದೆ ಒಬ್ಬ ಬಡ ರೈತನಿಗೆ ಅಧಿಕಾರಿಯೊಬ್ಬ ಕೊಟ್ಟಿರುವ ಕಾಟಕ್ಕೆ ಆ ರೈತ ತನಗೆ ಬೆನ್ನೆಲುಬಾಗಿರುವ ಎತ್ತುಗಳನ್ನೆ ಕೊಡಲು ಸಿದ್ದನಾಗಿದ್ದಾನೆ.ಆ ಕಥೆ ಏನೆಂದು ಹೇಳ್ತಿವಿ ಕೇಳಿ.

ಸವಣೂರು ನಿವಾಸಿಯಅದ ಯಲ್ಲಪ್ಪ ತಿಮ್ಮಣ್ಣ ಎಂಬ ರೈತನದ್ದು ಜಿಲ್ಲೆಯಲ್ಲಿ ಒಂದು ನಿವೇಶನವಿದೆ. ಕೆಲವು ವರ್ಷಗಳ ಹಿಂದೆ ಖರೀದಿ ಮಾಡಿದ್ದ ಆಗೆಲ್ಲ ಖಾತ ಉತಾರವನ್ನು ಕೈಯಲ್ಲಿ ಬರೆದು ಕೊಡುತಿದ್ದರು. ನಂತರದ ವರ್ಷಗಳಲ್ಲಿ ಪುರುಸಭೇ ವ್ಯಾಪ್ತಿಯಲ್ಲಿ ಇಸ್ವತ್ತು ಬಂದಿದ್ದರಿಂದ ಅದರಡಿ ಆಸ್ತಿ ವರ್ಗಾತಯಿಸಿ ಕೊಡಿ ಎಂದು ಯಲ್ಲಪ್ಪ ಪುರಸಭೆಗೆ ಅರ್ಜಿ ಸಲ್ಲಲಿಸಿದ್ದನು ಆಗಿನ ಪುರಸಭೆ ಮುಖ್ಯಅಧಿಕಾರಿ ಯಲ್ಲಪ್ಪನ ಹತ್ತಿರ 25000 ರೂ ಲಂಚವನ್ನು ಕೇಳಿದ್ದಾನೆ. ರೈತನ ಹತ್ತಿರ ಅಷ್ಟು ಹಣ ಕೊಡಲು ಆಗದ ಕಾರಣ ಪುರಸಭೆಗೆ ಎರಡು ಎತ್ತು ಮತ್ತು ಎತ್ತಿನ ಬಂಡಿಯನ್ನು ತೆಗೆದುಕೊಂಡು ಬಂದು ಇವನ್ನು ತೆಗೆದುಕೊಂಡು ನನಗೆ ಉತ್ತಾರ ತೆಗೆದುಕೊಡಿ ಎಂದು ಮನವಿ ಮಾಡಿದ್ದಾನೆ.

ಹೀಗಾಗಿ ಕಳೆದ ನಾಲ್ಕು ತಿಂಗಳುಗಳಿಂದ ನಾನು ಹೊಲದ ಕೆಲಸ ಬಿಟ್ಟು  ಕಚೇರಿಗೆ ಅಲೆಯುತಿದ್ದೇನೆ ನನಗೆ ಪ್ರತಿದಿನ ಕೆಲಸ ಬಿಟ್ಟು ಇಲ್ಲಿಗೆ ಬರಲು ಆಗುವುದಿಲ್ಲ ಅದಕ್ಕಾಗಿ ಎರಸು ಎತ್ತು ಮತ್ತು ಬಂಡಿಯನ್ನು ತೆಗೆದುಕೊಂಡು ನನಗೆ ಖಾತೆ ಬರೆದು ಕೊಡಿ ಎಂದು ಹೆಳಿದ್ದಾರೆ. ಇದು ಒಂದೆ ಅಲ್ಲ ಈ ತರದ ಘಟನೆ ಪ್ರತಿದಿನ ನೆಡೆಯತಿರುತ್ತದೆ.ಇವಕ್ಕೆ ಕೊನೆಯಂತು ಇಲ್ಲಬಿಡಿ.

ಇದರ ಬಗ್ಗೆ ನಿಮ್ಮ ಅಭಿಪ್ರಾಯು ತಿಳಿಸಿ

ಮದುವೆಯಾದ್ರಾ ? ನರೇಶ್ ಮತ್ತು ಪವಿತ್ರಾ ಲೋಕೇಶ್

ಮದುವೆಯಾದ್ರಾ ? ನರೇಶ್ ಮತ್ತು ಪವಿತ್ರಾ ಲೋಕೇಶ್

ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ

- Advertisement -

Latest Posts

Don't Miss