www.karnatakatv.net :ಗುಂಡ್ಲು ಪೇಟೆಯಲ್ಲಿ ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ 15ಕ್ಕೂ ಹೆಚ್ಚು ರೈತರಿಗೆ ಮಾಲೀಕತ್ವ ದೃಢೀಕರಣ ಪತ್ರವನ್ನು ವಿತರಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗಿದೆ ಅಂತ ಶಾಸಕ ನಿರಂಜನ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಗ್ರಾಮದ ಮಸಳ್ಳಿ ಎಲ್ಲೆಯ ಸುಮಾರು 15 ಮಂದಿ ರೈತರಿಗೆ ಸಾಗುವಳಿ ಹಕ್ಕುಪತ್ರ ನೀಡೋ ಸಲುವಾಗಿ ಇಂದು ಶಾಸಕ ಸಿ,ಎಸ್ ನಿರಂಜನ್ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ರು. ರೈತರು ಹಲವಾರು ವರ್ಷಗಳಿಂದ ಅದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಶಾಸಕ ತಾಲೂಕಿನ ಎರಡು ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣೆಗೆ ಸಿದ್ಧಪಡಿಸಿಕೊಳ್ಳಲಾಗ್ತಿದೆ. ಈ ವ್ಯಾಪ್ತಿಯಲ್ಲಿ ಸುಮಾರು 18 ಮಂದಿ ರೈತರು ಇದರ ಸೌಲಭ್ಯ ಪಡೆಯಲಿದ್ದಾರೆ. ಶೀಘ್ರವೇ ಹಕ್ಕುಪತ್ರ ವಿತರಿಸೋ ಕಾರ್ಯ ನಡೆಯಲಿದೆ ಅಂತ ಮಾಹಿತಿ ನೀಡಿದ್ರು.
ಇನ್ನು ಇದರಿಂದ ರೈತರ ಜೀವನೋಪಾಯಕ್ಕೆ ಸಹಕಾರಿಯಾಗುವಂತೆ ಜಮೀನಿನ ಮೇಲೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹೀಗಾಗಿ 40 ವರ್ಷಗಳಿಂದ ಜಮೀನಿನ ಬಗ್ಗೆ ಗೊಂದಲದಿಂದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಸಂತಸ ಮೂಡಿದೆ.
ಕರ್ನಾಟಕ ಟಿವಿ – ಗುಂಡ್ಲುಪೇಟೆ




