Sunday, September 8, 2024

Latest Posts

ವಿದ್ಯುತ್ ಖಾಸಗೀಕರಣ ಖಂಡಿಸಿ ನಗರದಲ್ಲಿ ಉರುಳು ಸೇವೆ ಆರಂಭಿಸಿದ ರೈತರು

- Advertisement -

www.karnatakatv.net : ಬೆಳಗಾವಿ: ದೇಶದಲ್ಲಿ ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣ ಮಾಡುತ್ತಿದ್ದು ಇದನ್ನ ಖಂಡಿಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಉರುಳು ಸೇವೆ ಮೂಲಕ ಮೋದಿ ಸರಕಾರದ ವಿರುದ್ದ ದಿಕ್ಕಾರ ಕೂಗಿದರು.

ಮಂಗಳವಾರ ನಗರದ ಚೆನ್ನಮ್ಮ ವೃತ್ತದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ  ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿದ್ದು ರೈತರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ.ವಿದ್ಯುತ್ ಖಸಗೀಕರಣ ಮಾಡಿದರೆ ರೈತರ ಜೀವನ ಅದೋಗತಿಗೆ ಬರುತ್ತದೆ. ಇದರಿಂದ ಹಲವು ದಿನಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಕೃಷಿ ಮಸೂದೆ ಜಾರಿಗೆ ತಂದಿದ್ದು ಇನ್ನುವರೆಗೂ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಯುತ್ತಿದೆ.

ಹೀಗಾಗಿ ರೈತರನ್ನ ಉಳಿಸುವ ಕೆಲಸ ಮಾಡುವುದನ್ನ ಬಿಟ್ಟು ರೈತರನ್ನ ಹತ್ತಿಕ್ಕುವ ಕೆಲಸ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ ಎಚ್ಚರಿಕೆ ನೀಡಿದರು.

ಹಸಿರು ಸೇನೆ ರಾಜ್ಯ ಸಂಚಾಲಕ ಗಣೇಶ ಮಾತನಾಡಿ ರೈತರಿಗೆ ಅನುಕೂಲ ಆಗುವಂತಹ ಕೆಲಸಗಳನ್ನ ಮಾಡುವುದನ್ನ ಬಿಟ್ಟು ವಿದ್ಯುತ್ ಇಲಾಖೆಯನ್ನೆ ಖಾಸಗಿ ಒಡೆತನಕ್ಕೆ ಬಿಟ್ಟು ಕೊಡುತ್ತಿರುವುದು ರೈತ ವಿರೋಧಿ ಆಗಿದೆ ಇದರಿಂದ ವಿದ್ಯುತ್ ಖಾಸಗೀಕರಣ ಮಾಡುವ ನಿರ್ದಾರವನ್ನು ಆದಷ್ಟು ಬೇಗನೆ ಹಿಂಪಡೆಯಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.  ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ರೈತರ ಸಮ್ಮುಖದಲ್ಲಿ ಇವತ್ತು ಪ್ರತಿಭಟನೆ ನಡೆಸಿದರು.

ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ

- Advertisement -

Latest Posts

Don't Miss